Madhuravagali Dampatya
₹120.00 ₹60.00
ಮಧುರವಾಗಲಿ ದಾಂಪತ್ಯ
ಪತಿ ಪತ್ನಿಯರಲ್ಲಿ `ನನ್ನವರು’ ಎಂಬ ಪ್ರೀತಿ ಮತ್ತು ಗೌರವ, ಒಬ್ಬರಿಗಾಗಿ ಮತ್ತೊಬ್ಬರು ತ್ಯಾಗ ಮಾಡುವ ಮನಸ್ಸು ಬೇಕು. ಮನೆಯಲ್ಲಿ ಮಕ್ಕಳು ನಗುತ್ತಿರಬೇಕು. ವೃದ್ಧರು ನೆಮ್ಮದಿಯಿಂದಿರಬೇಕು. ಮನೆಗೆ ಬಂದು ಹೋಗುವವರು ಇವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವಂತಿರಬೇಕು. ಹಾಗಿದ್ದರೆ ಮಾತ್ರ ಅದು ಸ್ವರ್ಗಕ್ಕೆ ಕಿಚ್ಚು ಹಚ್ಚುವ, ಸುಖ ದಾಂಪತ್ಯದಿಂದ ಕೂಡಿದ ಸುಖೀ ಸಂಸಾರ. ಇದೆಲ್ಲಾ ಆಗಬೇಕಾದರೆ ಅಷ್ಟೇ ತಿಳುವಳಿಕೆ, ಸ್ವಂತ ವಿವೇಚನಾಶಕ್ತಿಯ ಜೊತೆಗೆ ಅದರ ಬಗ್ಗೆ ಓದಿ, ಕೇಳಿ ತಿಳಿವ ಮನೋಭಾವವೂ ಬೇಕು. ಅನುಭವವೂ ಕೂಡಿಕೊಂಡಿರಬೇಕು. ಯಾವುದೆಲ್ಲಾ ಸುಖೀ ದಾಂಪತ್ಯಕ್ಕೆ ಕಾರಣವಾಗುತ್ತದೆ; ಯಾವುದು ಅಸುಖ ತರುತ್ತದೆ ಎಂದು ತಿಳಿಯಬೇಕಾದರೆ ಮನಸ್ಸಿನ ಆಟಗಳ ಬಗ್ಗೆ ಒಂದಿಷ್ಟು ಅರಿತಿರಬೇಕು. ಬೇಡದ ಹುಟ್ಟುಗುಣಗಳನ್ನು ಮಟ್ಟ ಹಾಕುವ ಶಕ್ತಿಯೂ ಬೇಕು. ಎಲ್ಲವೂ ಇನ್ನೊಬ್ಬರದೇ ತಪ್ಪು ಎಂದುಕೊಳ್ಳುವಲ್ಲಿ `ಇಲ್ಲ, ಅದರಲ್ಲಿ ನಮ್ಮ ಪಾಲೂ ಇದೆ’ ಎಂದು ತಿಳಿದರೆ ಆಗುವ ಅಸಮಾಧಾನದಲ್ಲಿ ಅರ್ಧ ಕಳೆಯುತ್ತದೆ. ನಮ್ಮ ಸ್ವದೋಷಗಳ ಬಗ್ಗೆ ನಮಗೆ
ಮನದಟ್ಟಾದರೆ ಇನ್ನೊಬ್ಬರನ್ನು ದೂಷಿಸುವ ಮೊದಲು ಎಚ್ಚರ ಮೂಡುತ್ತದೆ. ಅವಕ್ಕೆಲ್ಲಾ ಒಂದಿಷ್ಟು ಕೊಡುಗೆ ಈ ಪುಸ್ತಕದಲ್ಲಿ ದೊರೆಯಬಹುದು.
Reviews
There are no reviews yet.