Only logged in customers who have purchased this product may leave a review.

ಮನ್ ಕಿ ಬಾತ್ -1
$0.95 $0.86
ಮನ್ ಕಿ ಬಾತ್ -1:
ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಸರಕಾರಿ ಮಾಧ್ಯಮಗಳಾದ ಆಕಾಶವಾಣಿಯಲ್ಲಿ ಮಾತ್ರವಲ್ಲ; ಖಾಸಗಿ ರೇಡಿಯೋ ಚಾನೆಲ್ ಗಳೂ ಪ್ರಸಾರಕ್ಕೆ ಮುಂದಾಗಿದ್ದು ಈ ಕಾರ್ಯಕ್ರಮದ ಜನಪ್ರಿಯತೆಗೆ ಮತ್ತೊಂದು ಸಾಕ್ಷಿ. ದೇಶದಲ್ಲಿ ಖಾಸಗಿ ವ್ಯವಸ್ಥೆಯಲ್ಲಿ ರೇಡಿಯೋ ಚಾನೆಲ್ ಗಳು ನಿಧಾನವಾಗಿ ತಳ ಊರುತ್ತಿದ್ದ ಇನ್ನು ಮುಂದೆ ಖಾಸಗಿ ಚಾನೆಲ್ ಗಳಲ್ಲಿಯೂ ಸುದ್ದಿ ಮತ್ತು ಸುದ್ದಿ ಆಧಾರಿತ ಕಾರ್ಯಕ್ರಮವನ್ನು ಬಿತ್ತರಿಸಲು ಅವಕಾಶ ಮಾಡಿಕೊಡುವ ಕುರಿತಾದ ಚಿಂತನೆ ಆರಂಭವಾಗಿದೆ. ಈ ದಿಸೆಯಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಖಾಸಗಿ ಚಾನಲ್ ಗಳು ಬಿತ್ತರಿಸುತ್ತಿರುವುದು ಒಂದು ಸಣ್ಣ ಹೆಜ್ಜೆ ಎಂದೇ ಮಾಧ್ಯಮ ವಲಯಗಳಲ್ಲಿ ಬಿಂಬಿತವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನ ಏಳು ಕಂತುಗಳು ಏಪ್ರಿಲ್ ಅಂತ್ಯದ ವರೆಗೆ ಪ್ರಸಾರವಾಗಿದ್ದು ಅವುಗಳ ಕನ್ನಡ ಅನುವಾದವನ್ನು ಕನ್ನಡ ಸಾರಸ್ವತ ಲೋಕಕ್ಕೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಅಪ್ರಿಸುತ್ತಿದೆ. ಈ ಪುಸ್ತಕದ ತಯಾರಿಯಲ್ಲಿ ನೇರವಾದ ಆಕಾಶವಾಣಿಯ ಡಾ. ಶಶಿಧರ ನರೇಂದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಪ್ರಕಾಶನದ ಇತರ ಕೃತಿಗಳನ್ನು ಪೋಷಿಸಿದಂತೆ ಇದನ್ನೂ ಓದುಗ ವರ್ಗ ತುಂಬು ಹೃದಯದಿಂದ ಸ್ವಾಗತಿಸಿ, ಪೋಷಿಸುತ್ತದೆ ಎಂಬ ನಂಬಿಕೆ ಪ್ರಕಾಶನದ್ದು.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.