Only logged in customers who have purchased this product may leave a review.

ಮನ್ ಕಿ ಬಾತ್ -2
$1.77 $1.59
ಮನ್ ಕಿ ಬಾತ್ -2:
ಮೊದಲ ಭಾಗ ಎರಡು ಮುದ್ರಣಗಳನ್ನು ಕಂಡ ಬೆನ್ನಲೇ ‘ಮನ್ ಕಿ ಬಾತ್’ನ ಮತ್ತೆ ಹತ್ತು ಕಂತುಗಳನ್ನು ಒಳಗೊಂಡ ಎರಡನೇ ಭಾಗ ಈಗ ನಿಮ್ಮ ಕೈಯಲ್ಲಿದೆ. ಮೊದಲ ಏಳು ಕಂತುಗಳನ್ನು ಒಳಗೊಂಡ ಪುಸ್ತಕಕ್ಕಿಂತ ಇದು ವಿಭಿನ್ನ ಸ್ವರೂಪದ್ದು ಎಂಬುದು ಉಲ್ಲೇಖಾರ್ಹ. ಏಕೆಂದರೆ ಈ ಕಂತುಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕೊಂಚ ವಿಭಿನ್ನವಾಗಿ ರೋಪಿಸಿದರು ಎಂಬುದು ಇದಕ್ಕೆ ಕಾರಣ. ತಮ್ಮ ಭಾಷಣಕ್ಕೆ ಮುನ್ನ ಶ್ರೋತೃಗಳಿಂದ ಆಹ್ವಾನಿಸುತ್ತಿದ್ದ ಸಲಹೆ-ಸೂಚನೆಗಳನ್ನು ತಮ್ಮ ಆಯಾ ಕಂತಿನಲ್ಲಿ ಅಳವಡಿಸಿಕೊಳ್ಳುವ ಜತೆಗೆ ಆಯಾ ಸಂಧರ್ಭದಲ್ಲಿನ ಘಟನೆಗಳು, ಆಗು ಹೋಗುಗಳನ್ನು ಉಲ್ಲೇಖಿಸಿ ನಾಗರಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಉತ್ಸಾಹವನ್ನು ತುಂಬುವ ಕೆಲಸವನ್ನು ಪ್ರಧಾನಿ ಅವರು ಮಾಡಿದ್ದಾರೆ. ಇದರ ಜತೆಗೆ ವಿಭಿನ್ನ ಕ್ಷೇತ್ರಗಳ ಗಣ್ಯರನ್ನು ತಮ್ಮ ಭಾಷಣದೊಂದಿಗೆ ಜೋಡಿಸಿ ತಮ್ಮ ‘ಮನ್ ಕಿ ಬಾತ್’ಗೆ ಹೊಸ ರೂಪು ನೀಡುವ ಜತೆಗೆ ತಾವು ನಿದಾ ಬಯಸಿದ್ದ ಸಂದೇಶಕ್ಕೆ ಗಣ್ಯರ ಅಭಿಪ್ರಾಯವನ್ನೂ ಜೋಡಿಸಿ ‘ಮನ್ ಕಿ ಬಾತ್’ನ ಕಂತುಗಳು ಹೆಚ್ಚು ಪರಿಣಾಮಕಾರಿಯಾಗಿ ಶ್ರೋತೃಗಳನ್ನು ತಲುಪುವಂತೆ ಮಾಡಿದ್ದಾರೆ. ಎಂಬುದು ವಿಶೇಷ.
ಪುಸ್ತಕ ರೂಪದಲ್ಲಿ ಓದುವಾಗಲೂ ಕೂಡ ಶ್ರೀ ಮೋದಿ ಅವರ ಮಾತಿನ ಅನನ್ಯ ಶೈಲಿ ಮನಸ್ಸಿಗೆ ಹಿಡಿಸುತ್ತದೆ. ಅಲ್ಲಿ ಯಾವುದೂ ಕೃತಕ ಭಾವನೆಗಳಾಗಲೀ, ಸುಳ್ಳು ಭರವಸೆಗಳಾಗಲಿ ಇರದೆ, ಆ ಕ್ಷಣಕ್ಕೆ ಮನಸ್ಸಿನಿಂದಲೇ ಚಿಮ್ಮುವ ವಿಚಾರಗಳೆನಿಸಿ ಅದು ನಮ್ಮ ಹೃದಯಕ್ಕೆ ತಾಕುತ್ತದೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.