ಮನ್ ಕಿ ಬಾತ್ -4
130.00 117.00 Add to basket
Sale!

ಮನ್ ಕಿ ಬಾತ್ -4

130.00 117.00

ಮನ್ ಕಿ ಬಾತ್ -4:

ಆಕಾಶವಾಣಿ ಮಾದ್ಯಮದಲ್ಲಿ ಮನದ ಮಾತುಗಳನ್ನಾಡುತ್ತಾ ಮೂರು ವರ್ಷಗಳು ಕಳೆದವು. ಈ ಮನ್ ಕಿ ಬಾತ್ ನಲ್ಲಿ ಒಂದು ರೀತಿಯಲ್ಲಿ ಭಾರತದ ಒಂದು ಸಕಾರಾತ್ಮಕ ಶಕ್ತಿಯಾಗಿದೆ. ದೇಶದ ಮೂಲೆ ಮೂಲೆಯಲ್ಲಿ ಭಾವನೆಗಳು ತುಂಬಿವೆ, ಅಪೇಕ್ಷೆಗಳಿವೆ, ಬೇಡಿಕೆಗಳಿವೆ, ಕೆಲವು ಕಡೆ ಆಕ್ಷೇಪಣೆಗಳೂ ಇವೆ. ಒಂದು ಜನಮಾನಸದಲ್ಲಿ ಭಾವನೆಗಳು ಉಮ್ಮಳಿಸುತ್ತಿರುತ್ತವೆ. ಮನ್ ಕಿ ಬಾತ್ ನಲ್ಲಿ ಆ ಎಲ್ಲ ಭಾವನೆಗಳನ್ನು ಬೆಸೆಯುವ ಒಂದು ಅದ್ಭುತವಾದ ಸದವಕಾಶವನ್ನು ನನಗೆ ನೀಡಲಾಯಿತು. ನಾನು ಎಂದೂ ಕೂಡ ಇದು ನನ್ನ ಮನದ ಮಾತು ಎಂದಿಲ್ಲ. ಈ ಮನ್ ಕಿ ಬಾತ್ ದೇಶವಾಸಿಗಳ ಮನದೊಂದಿಗೆ ಬೆಸೆದುಕೊಂಡಿದೆ. ಅವರ ಭಾವನೆಗಳೊಂದಿಗೆ ಹೊಂದಿಕೊಂಡಿದೆ. ಅವರ ಅಸೆ-ಅಪೇಕ್ಷೆಗಳನ್ನು ಒಳಗೊಂಡಿದೆ. ಅಂತೆಯೇ ಈ ಮನ್ ಕಿ ಬಾತ್ ನಲ್ಲಿ ನಾನು ಮಾತನಾಡುವ ಎಲ್ಲ ವಿಷಯಗಳೂ ದೇಶದ ಮೂಲೆ ಮೂಲೆಯಲ್ಲಿರುವ ಜನರು ನನ್ನೊಂದಿಗೆ ಹಂಚಿಕೊಂಡ ಮಾತುಗಳೇ. ನಾನು ಬಹಳ ಕಡಿಮೆ ಮಾತನಾಡುತ್ತೇನೆ. E-mail ಮೂಲಕ, ದೂರವಾಣಿ ಮೂಲಕ, My Govನಲ್ಲಿ Narendra Modi Appನಲ್ಲಿ ಈ ಎಲ್ಲ ಮುಗಳಿಂದ ಇವಿಷ್ಟು ಮಾತುಗಳು ನನಗೆ ತಲುಪುತ್ತವೆ. ತಿಂಗಳಿನಲ್ಲಿ ಕೇವಲ ಅರ್ಧ ಗಂಟೆಯಷ್ಟು ಸಮಯವನ್ನು ಮಾತ್ರ ನಾನು ತಮ್ಮಿಂದ ಪಡೆಯುತ್ತೇನೆ. ಆದರೆ ಜನರು 30 ದಿನವೂ ಕಾಲ ಮನ್ ಕಿ ಬಾತ್ ಕುರಿತೇ ಮಾತನಾಡುತ್ತಿರುತ್ತಾರೆ. ಇದರ ಪರಿಣಾಮದಿಂದ ಸರಕಾರದಲ್ಲಿ ಸಂವೇದನೆಯು ಉಂಟಾಗಿದೆ. ಹಾಗಾಗಿ ಮೂರು ವರ್ಷಗಳ ಈ ಮನ್ ಕಿ ಬಾತ್ ನ ಯಾತ್ರೆಯು ದೇಶವಾಸಿಗಳ ಭಾವನೆಗಳ ಅನುಭೂತಿಯ ಒಂದು ಯಾತ್ರೆಯಾಗಿದೆ.ಇಷ್ಟು ಕಡಿಮೆ ಅವಧಿಯಲ್ಲಿ ದೇಶದ ಸಾಮಾನ್ಯ ಜನರ ಭಾವನೆಗಳನ್ನು ತಿಳಿಯಲು, ಅರಿಯಲು ಈ ಒಂದು ಅವಕಾಶ ನನಗೆ ಸಿಕ್ಕಿದಿ. ಆ ಕಾರಣಕ್ಕಾಗಿ ದೇಶಬಾಂಧವರಿಗೆ ನಾನು ತುಂಬ ಋಣಿಯಾಗಿದ್ದೇನೆ.

  • Book Format: Paperback
  • Author: Narendra Modi
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.