Only logged in customers who have purchased this product may leave a review.

ಮನ್ ಕಿ ಬಾತ್ -5
$1.77 $1.59
ಮನ್ ಕಿ ಬಾತ್ -5:
ನನ್ನ ಪ್ರೀತಿಯ ದೇಶಬಂಧುಗಳೇ, ಈಹೊತ್ತು ನಾನೊಂದು ವಿಶೇಷ ರೂಪದಲ್ಲಿ ತಮ್ಮೆಲ್ಲರ ಋಣವನ್ನು ಸ್ವೀಕರಿಸುತ್ತೇನೆ. ಹೃದಯದಾಳದಿಂದ ನಾನು ತಮ್ಮೇಳಾರಿಗೂ ಆಭಾರ ಮಣ್ಣುಸುತ್ತೇನೆ. ಹಾಗೆಂದು ತಾವು ಬಹಳ ದಿನಗಳಿಂದ ಈ ಮನ್ ಕಿ ಬಾತ್ ನೊಂದಿಗೆ ಇದ್ದೀರಿ ಎಂಬುದಕ್ಕಲ್ಲ. ನಾನು ತಮಗೆ ಕೃತಜ್ಞತೆ ವ್ಯಕ್ತಮಾಡಬಯಸುವುದೇಕೆ ಎಂದರೆ ಮನ್ ಕಿ ಬಾತ್ ನ ಕಾರ್ಯಕ್ರಮದೊಂದಿಗೆ ದೇಶದ ಎಲ್ಲ ಮೂಲೆಗಳಿಂದ ಲಕ್ಷಾಂತರ ಜನರು ಒಂದಾಗುತ್ತಾರೆ. ಕೇಳುವರ ಸಂಖ್ಯೆಯಂತೂ ಕೋಟಿಗಟ್ಟಲೇ ಇದೆ. ಆದರೆ ಲಕ್ಷಾಂತರ ಜನರು ನನಗೆ ಪತ್ರ ಬರೆಯುತ್ತಾರೆ. ಕೆಲವರು ಮೆಸೇಜ್ ಕಳಸುತ್ತಾರೆ. ಕೆಲವೊಮ್ಮೆ ಫೋನ್ ಮೂಲಕ ಸಂದೇಶಗಳು ಬರುತ್ತವೆ. ಇವೆಲ್ಲವೂ ನನಗೊಂದು ದೊಡ್ಡ ಭಂಡಾರವಾಗಿದೆ. ದೇಶದ ಜನರ ಮನಸ್ಸನ್ನು ತಿಳಿದುಕೊಳ್ಳಲು ಇದೊಂದು ಬಹು ದೊಡ್ಡ ಅವಕಾಶವಾಗಿದೆ. ತಾವು ಅದೆಷ್ಟು ಕುತೂಹಲದಿಂದ ಈ ಮನ್ ಕಿ ಬಾತ್ ಗಾಗಿ ಕಾಯುತ್ತೀರೋ, ಅದಕ್ಕಿಂತಲ್ಲೂ ಅಧಿಕ ಕೌತುಕತೆಯಿಂದ ತಮ್ಮ ಸಂದೇಶಗಳ ನಿರೀಕ್ಷೆಯನ್ನು ನಾನು ಮಾಡುತ್ತೇನೆ. ನಾನು ಬಹಳ ಉತ್ಸುಕನಾಗಿರುತ್ತೇನೆ, ಏಕೆಂದರೆ ತಮ್ಮ ಪ್ರತಿಯೊಂದು ಮಾತಿನಿಂದಲೂ ನನಗೆ ಕಲಿಯಲು ಸಿಗುತ್ತದೆ. ನಾನೇನು ಮಾಡುತ್ತಿರುವೆನೋ ಅದರ ಸಾಧಕ ಬಾಧಕಗಳ ಬಗ್ಗೆ ತಿಳಿಯುವ ಸದಾವಕಾಶವಿದಾಗಿದೆ. ಬಹಳಷ್ಟು ವಿಷಯಗಳನ್ನು ಇನ್ನೊಂದು ಆಯಾಮದಿಂದ ಯೋಚನೆ ಮಾಡುವಂತೆ ತಮ್ಮ ಚಿಕ್ಕ-ಚಿಕ್ಕ ಮಾತುಗಳು ನನ್ನ ಕೆಲಸಕ್ಕೆ ಬರುತ್ತವೆ. ಆದ್ದರಿಂದ ಈ ಕಾರಣಕ್ಕಾಗಿಯೇ ನಾನು ತಮಗೆ ಕೃತಜ್ಞತೆಯನ್ನು ಸಲ್ಲಿಸಬಯಸುತ್ತೇನೆ. ತಮ್ಮ ಋಣ ಸಂದಾಯ ಮಾಡಬಯಸುತ್ತೇನೆ. ಅದೂ ಅಲ್ಲದೇ ನಾನು ನಿರಂತರವಾಗಿ ಪ್ರಯತ್ನಿಸುವುದೇನೆಂದರೆ, ಸಾಧ್ಯವಾದಷ್ಟು ತಮ್ಮ ಮಾತುಗಳನ್ನು ನಾನೆ ಸ್ವಯಂ ನೇರವಾಗಿ ಕೇಳಿ, ನೋಡಿ, ಓದಿ, ತಿಳಿಯಬಯಸುತ್ತೇನೆ. ಈಗ ನೋಡಿ, ಈ ಫೋನ್ ಕಾಲ್ ಮೂಲಕ ತಾವೂ ಕೂಡ ಇದರಲ್ಲಿ ಭಾಗಿಯಾಗುತ್ತಿರುವಿರಿ. ಇದು ನನಗೆ ಬಹಳ ಸಂತಸವನ್ನು ತಂದಿರುವ ಸಂಗತಿ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.