Only logged in customers who have purchased this product may leave a review.

ಮಣ್ಣಿನ ಓದು
$2.04 $1.84
ಮಣ್ಣಿನ ಓದು:
ಎತ್ತಿನ ಜೊತೆ ಮಾತಾಡುತ್ತ ಹೊಲದಲ್ಲಿ ಉಳುಮೆ ನಡೆಸಿ ಕೃಷಿ ಬದುಕು ಕಟ್ಟಿದ ಕುಟುಂಬದ ಈ ತಲೆಮಾರಿನ ತಲೆತುಂಬ ಈಗ ಪದವಿ ಪ್ರಮಾಣ ಪಾತ್ರಗಳಿವೆ. ಅವನ್ನು ಹೊತ್ತು ಎಲ್ಲರೂ ನಗರ ನೌಕರಿಯಲ್ಲಿ ಕಳೆದು ಹೋಗಿದ್ದಾರೆ. ಅಜ್ಜನ ಹೆಸರು ಮೊಮ್ಮಗನಿಗೆ ಗೊತ್ತಿಲ್ಲ. ನೆಲಮೂಲದ ಕೊಂಡಿ ಕಳಚಿದೆ. ಮಣ್ಣು ಮುಟ್ಟದೆ ಅಕ್ಷರ ಓದಿದ ತಲೆಮಾರು ಕಾಂಕ್ರೀಟ್ ನೀತಿಗೆ ಅಂಟಿದೆ. ಕೃಷಿಯಲ್ಲಿ ಮಾಗಿದ ಹಿರಿಯ ಜೀವಗಳು ನಮ್ಮ ಜೊತೆ ಈಗಲೂ ಇವೆ. ಗ್ರಾಮಲೋಕಕ್ಕೆ ಹಸಿರು ತುಂಬಲು ಶ್ರಮಿಸಿದ ಜ್ಞಾನಿಗಳು ಪಿಳಿಪಿಳಿ ಕಣ್ಣುಬಿಡುತ್ತ ಮನೆಯ ಮೂಲೆಯಲ್ಲಿ ತೆಪ್ಪಗೆ ಕುಳಿತಿದ್ದಾರೆ. ಅವರನ್ನು ಅಕ್ಕರೆಯಲ್ಲಿ ಮಾತಾಡಿಸಿದರೆ ಕೌತುಕದ ಕತೆಗಳು ಸಿಗುತ್ತವೆ. ಇವರಲ್ಲಿ ಕಾಲದ ಕೃಷಿ ಕತೆಗಳಿವೆ. ನಾವು ಏಲ್ಲಿಂದ ಎಲ್ಲಿಗೆ ಬಂದವರೆಂದು ತಿಳಿಯಲು ಇವರ ಮಾತುಗಳೇ ನಮಗಿರುವ ಏಕ್ಕೆಕ ಆಕರವಾಗಿವೆ. ಕೃಷಿಯ ಅಭಿಮಾನ ಮೂಡಲು ಶತಮಾನಗಳ ಬದುಕು ಓದುವ ಕೆಲಸ ನಡೆಯಬೇಕಲ್ಲವೇ?
ರಾಜ್ಯದ ಕೃಷಿ ಪರಿಸರ ಬರಹಗಾರರಲ್ಲಿ ಶಿವಾನಂದ ಕಳವೆ ಚಿರಪರಿಚಿತ ಹೆಸರು. ಕಳೆದ ಎರಡು ದಶಕಗಳಿಂದ ಕಾಡು, ಹೊಲ, ನದಿ ಮೂಲಗಳಿಂದ ಇವರು ಎತ್ತಿತಂದ ಅಧ್ಯಯನ ಬರಹಗಳು ನಾಡಿನ ಕಣ್ತೆರೆಸಿವೆ. ಕೃಷಿ – ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿವೆ. ಈಗ ನಿರಂತರವಾಗಿ ರಾಜ್ಯದ ಕೃಷಿ ಪ್ರವಾಸದಲ್ಲಿರುವ ಕಳವೆ ಕನ್ನಡ ಪ್ರವಾಸ ಕಥನಗಳಲ್ಲಿಯೇ ವಿಶೇಷವಾದ ಮಾರ್ಗವನ್ನು ‘ಮಣ್ಣಿನ ಓದು’ ಕೃತಿಯಲ್ಲಿ ತೆರೆದಿಟ್ಟಿದ್ದಾರೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.