Only logged in customers who have purchased this product may leave a review.

ಮೋದಿ; ಮುಸ್ಲಿಂ ವಿರೋಧಿಯೇ?
$2.04 $1.84
ಮೋದಿ; ಮುಸ್ಲಿಂ ವಿರೋಧಿಯೇ?:
ಅದು ಫೆಬ್ರವರಿ 2002. ಗುಜರಾತ್ ಕೋಮುಗಲಭೆ ತುತ್ತತುದಿಯಲ್ಲಿತ್ತು. ನನಗೆ ಆಗಾ ಖಾನ್ ರ ಕಚೇರಿಯಿಂದ ಫೋನ್ ಕರೆಯೊಂದು ಬಂತು. ಹಿಂದುಗಳೇ ಹೆಚ್ಚಾಗಿ ವಾಸವಿದ್ದ ಪ್ರದೇಶದ ಮಧ್ಯದಲ್ಲಿದ್ದ ಖೋಜಾ ಮುಸ್ಲಿಮರ ಕಾಲೋನಿಗೆ ದಾಳಿಯ ಬೆದರಿಕೆ ಇದೆಯೆಂದು ಅವರು ನನಗೆ ತಿಳಿಸಿದರು. ವಾಜಪೇಯಿಯವರ ಎನ್.ಡಿ.ಎ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿಯವರಿಗೆ ನಾನು ಫೋನ್ ಮಾಡಿದೆ. ಅಡ್ವಾಣಿ ಮೋದಿಯವರ ಜೊತೆ ಮಾತಾಡುದರು. ಕೆಲವೇ ಕ್ಷಣಗಳಲ್ಲಿ ನರೇಂದ್ರ ಮೋದಿಯವರೇ ನನಗೆ ಕರೆಮಾಡಿ, “ನಜ್ಮಾ ಬೆನ್ ದಯವಿಟ್ಟು ನೀವು ಚಿಂತೆ ಮಾಡಬೇಡಿ, ನಾನು ವೈಯಕ್ತಿಕವಾಗಿ ಈ ಬಗ್ಗೆ ಗಮನಹರಿಸಿ ಅವರು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುತ್ತೇನೆ” ಎಂದರು ಹಾಗೂ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡರು. ಕೂಡಲೇ ಸೈನ್ಯವನ್ನು ಕಳಿಸಿ, ಆ ಕಾಲೋನಿಗೆ ಯಾವ ಅಪಾಯ ಆಗದಂತೆ ನೋಡಿಕೊಂಡರು. ಅಲ್ಲಿನ ಸ್ಥಳೀಯ ಮುಸ್ಲಿಮರು ನನಗೆ ಹೇಳಿದ ಪ್ರಕಾರ ಈ ಮುಸ್ಲಿಂ ಕಾಲೊನಿಯು ಎಲ್ಲಾ ಕಡೆಗಳಿಂದಲೂ ಹಿಂದು ಪ್ರದೇಶಗಳಿಂದ ಸುತ್ತುವರಿದಿದ್ದು ಒಂದು ವೇಳೆ ಗಲಭೆಕೋರರು ‘ಕಂಕಾಡಿಯಾ’ ಎಂಬ ಈ ಪ್ರದೇಶಗಳಿಂದ ದಾಳಿ ಮಾಡಿದೇ ಆಗಿದ್ದರೆ, ಆಗ ಅಲ್ಲಿನ ಜನರಿಗೆ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲದಾಗುತ್ತಿತ್ತು. ಇನ್ನೊಂದು ನರೋಡಾ ಪಾತಿಯಾ ಆಗಿಬಿಡುವ ಸಾಧ್ಯತೆ ಇತ್ತು. ನನ್ನ ಅನುಭವದ ಪ್ರಕಾರ ಮೋದಿಯವರು, ಅವರ ಗಮನಕ್ಕೆ ಬಂದ ಎಲ್ಲಾ ದೂರುಗಳಿಗೂ, ಕರೆಗಳಿಗೂ ಸ್ಪಂದಿಸಿ ವೈಯಕ್ತಿಕವಾಗಿಯೇ ಅವುಗಳನ್ನು ಪರಿಹರಿಸಲು ಆಸ್ಥೆ ವಹಿಸಿದ್ದರು. ಮೋದಿಯವರು ಬೋಹ್ರಾ ಹಾಗೂ ಖೋಜಾ ಮುಸ್ಲಿ ಸಮುದಾಯಕ್ಕೆ ಗಣನೀಯವಾದ ಸಹಾಯ ಮಾಡಿದ್ದಾರೆ. ಸೈಯೇದ್ನಾ ಅವರ ನೂರನೇ ಹುಟ್ಟಿದ ಹಬ್ಬಕ್ಕೂ ಮೋದಿ ಹೋಗಿದ್ದರು. ಈ ಮಧ್ಯೆ, ಆಗಾ ಖಾನ್ ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಬಹುಶಃ ಅವರು ಮೋದಿಯವರನ್ನೂ ಭೇಟೆಯಾಗಿರಬೇಕು. ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂಸದ್ದೇನೆಂದರೆ ಬಿಜೆಪಿಯಲ್ಲಿ ಮಾತ್ರ ಮುಸ್ಲಿಮರಿಗೆ ಗೌರವಾರ್ಹ ಸ್ಥಾನ ಸಿಗುತ್ತದೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.