ಈ ಪುಸ್ತಕಕ್ಕೆ ತಳಹದಿಯಾಗಿರುವುದು ಪ್ರಾಯೋಗಿಕ ಅಥವಾ ವ್ಯಾವಹಾರಿಕ ಸಿದ್ಧಾಂತವೇ ವಿನಾ, ತತ್ತ್ವಶಾಸ್ತ್ರವಲ್ಲ. ಹೀಗಾಗಿ ಇದೊಂದು ಕಾರ್ಯೋಪಯೋಗಿ ಕೈಪಿಡಿಯೇ ವಿನಾ ಸಿದ್ಧಾಂತಗಳ ಕುರಿತಾದ ಪ್ರಕರಣಗ್ರಂಥವಲ್ಲ. ‘ಹಣ’ ಎಂಬುದೇ ‘ತುರ್ತು ಅಗತ್ಯವಾಗಿ’ ಪರಿಣಮಿಸಿರುವವರನ್ನು, ಮೊದಲು ಶ್ರೀಮಂತಿಕೆ ಪಡೆದು ತರುವಾಯದಲ್ಲಿ ತಾತ್ತ್ವಿಕ ಚಿಂತನೆಗಳೆಡೆಗೆ ಹೊರಳಲು ಬಯಸುವಂಥವರನ್ನು ಉದ್ದೇಶವಾಗಿಟ್ಟುಕೊಂಡು ಕಟ್ಟಿಕೊಟ್ಟಿರುವ ಕೃತಿಯಿದು. ತತ್ತ್ವಮೀಮಾಂಸೆಯ ಆಳ ಅಧ್ಯಯನಕ್ಕೆ ಸಮಯ – ಸಂಪನ್ಮೂಲ- ಅವಕಾಶವನ್ನು ಇದುವರೆಗೂ ಕಂಡುಕೊಂಡಿರದಿದ್ದರೂ ಫಲಿತಾಂಶವನ್ನು ಬಯಸುವ ಮತ್ತು ತಾವು ಕೈಗೊಳ್ಳುವ ಕ್ರಮಕ್ಕೆ ಒಂದು ಕ್ರಮಬದ್ಧ ಶಾಸ್ತ್ರ ಅಥವಾ ವಿಜ್ಞಾನದ ತೀರ್ಮಾನವನ್ನು (ಆ ತೀರ್ಮಾನಕ್ಕೆ ಕಾರಣವಾದ ಎಲ್ಲ ಪ್ರಕ್ರಿಯೆಗಳ ಆಳಕ್ಕಿಳಿಯದೆ) ಆಧಾರವಾಗಿಟ್ಟುಕೊಳ್ಳಲು ದೃಢಸಂಕಲ್ಪ ಮಾಡು ವಂಥವರಿಗೆ ಮೀಸಲಾದ ಕೃತಿಯಿದು.
ಆದ್ದರಿಂದ, ಮಾರ್ಕೋನಿ, ಥಾಮಸ್ ಆಲ್ವಾ ಎಡಿಸನ್ರಂಥ ಪ್ರತಿಭಾವಂತ ವಿಜ್ಞಾನಿಗಳು ಪ್ರತಿಪಾದಿಸಿದ ವಿದ್ಯುಚ್ಛಕ್ತಿಯ ಕಾರ್ಯಾಚರಣಾ ನಿಯಮ ಸಂಬಂಧಿತ ವ್ಯಾಖ್ಯೆಗಳನ್ನು ಸ್ವೀಕರಿಸುವಂತೆಯೇ, ಈ ಕೃತಿಯಲ್ಲಿನ ಮೂಲಭೂತ ತತ್ತ್ವ ಅಥವಾ ನಿಯಮಗಳನ್ನು ಓದುಗರು ನಿಸ್ಸಂದಿಗ್ಧವಾಗಿ ಸ್ವೀಕರಿಸುತ್ತಾರೆ, ನಂಬುತ್ತಾರೆ ಮತ್ತು ಯಾವುದೇ ಭಯ, ಹಿಂಜರಿಕೆಯಿಲ್ಲದೆ ಅವನ್ನು ಕಾರ್ಯರೂಪಕ್ಕೆ ತಂದು ಅವುಗಳ ಹಿಂದಡಗಿರುವ ಸತ್ಯವನ್ನು ಸಾಬೀತುಮಾಡುತ್ತಾರೆ ಎಂಬುದು ಸಹಜ ನಿರೀಕ್ಷೆ. ಇಂಥ ಹೆಜ್ಜೆಯಿರಿಸುವ ಪ್ರತಿಯೊಬ್ಬರೂ ಶ್ರೀಮಂತರಾಗುವುದು ಖಂಡಿತ; ಕಾರಣ, ಇಲ್ಲಿ ಅನ್ವಯಿಸಲಾಗಿರುವ ವಿಜ್ಞಾನ ಒಂದು ಕರಾರುವಾಕ್ಕಾದ ವಿಜ್ಞಾನವಾಗಿದ್ದು, ಇಲ್ಲಿ ವೈಫಲ್ಯಕ್ಕೆ ಅವಕಾಶವೇ ಇಲ್ಲ.

ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ
Sale!
ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ
$1.36 $1.09
ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.
- Translator: Yagati Raghu Nadig
- Publisher: Vamshi Publications
- Book Format: Ebook
- Category: Articles
- Language: Kannada
- Year Published: 2019
- Pages: 112
Only logged in customers who have purchased this product may leave a review.
Reviews
There are no reviews yet.