Odabeda Edurisu
₹110.00 ₹55.00
ಓಡಬೇಡ ಎದುರಿಸು…
ಉತ್ತುಂಗ ಬದುಕಿಗೆ ಧೀಮಂತ ಚಿಂತನೆಗಳು
ಈ ಕೃತಿಯು ಪರಮ ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿಯವರು ತಮ್ಮ ಆಶ್ರಮ ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿರುವ ‘ನವ ಚಿಂತನ’ ತ್ರೈಮಾಸಿಕ ಪತ್ರಿಕೆಗೆ ಬರೆಯುತ್ತ ಬಂದಿರುವ ಸಂಪಾದಕೀಯ ಲೇಖನಗಳಿಂದ ಆಯ್ದ ಮೌಲಿಕ ಲೇಖನಗಳನ್ನು ಒಳಗೊಂಡಿದೆ. ವರ್ತಮಾನದಲ್ಲಿ ಕುಸಿಯುತ್ತಿರುವ ನೈತಿಕಪ್ರಜ್ಞೆಯನ್ನು, ರಾಷ್ಟ್ರಪ್ರೇಮವನ್ನು, ನಿರ್ಭಯತೆಯನ್ನು, ವಿವೇಕವನ್ನು, ವಿನಯವನ್ನು, ಧೀರೊದ್ಧಾತ್ತ ನಾಯಕತ್ವದ ಗುಣಗಳನ್ನು ವಿಶೇಷವಾಗಿ ಯುವಮನಸ್ಸುಗಳಲ್ಲಿ ಮರುಬಿತ್ತನೆ ಮಾಡುವ ತೀವ್ರತರವಾದ ತುಡಿತ ಪ್ರಸ್ತುತ ಲೇಖನಗಳಲ್ಲಿ ವ್ಯಾಪ್ತವಾಗಿರುವುದನ್ನು ಯಾರೂ ಪರಿಭಾವಿಸಬಾರದು. ಬದುಕಿನ ಹತಾಶೆಗೆ, ಅರಿವಿನ ಅಭಾವಕ್ಕೆ, ಮನುಷ್ಯತ್ವದ ಕೊರತೆಗೆ, ಬದುಕಿನ ಅನರ್ಥಕತೆಗೆ, ತಂದೆ-ತಾಯಿಗಳ ಬೇಜವಾಬ್ದಾರಿಕೆಗೆ, ಅಭಿಮಾನಶೂನ್ಯತೆಗೆ, ಮಾನಸಿಕ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ನೀಡಬಲ್ಲ ಮತ್ತು ಬದುಕಿಗೆ ದಾರಿದೀಪವಾಗಬಲ್ಲ ಕೃತಿ ಇದಾಗಿದೆ.
Reviews
There are no reviews yet.