ಒಂದು ತುತ್ತಿನ ಕಥೆ
180.00 162.00 Add to basket
Sale!

ಒಂದು ತುತ್ತಿನ ಕಥೆ

180.00 162.00

ಒಂದು ತುತ್ತಿನ ಕಥೆ:

ಹೊಲದಲ್ಲಿ ಹಸಿರು ಚಿತ್ರ ಬರೆದವರ ಬದುಕು ಅರಿಯುತ್ತಾ ಕಳೆದ ಹೋಗುವಲ್ಲಿ ಎಂಥದೋ ಖುಷಿಯಿದೆ. ಕೃಷಿ ಸಾಧಕರ ದರ್ಶನಕ್ಕೆ ಹೋದ ಬರಹಗಾರ ಶಿವಾನಂದ ಕಳವೆ ಕೊಂಡ ನೋಟವನ್ನು ‘ಒಂದು ತುತ್ತಿನ ಕಥೆ’ಯಲ್ಲಿ ದಾಖಲಿಸಿದ್ದಾರೆ. ಇದು ಈಗಾಗಲೇ ಪ್ರಕಟವಾದ ‘ಮಣ್ಣಿನ ಓದು’ ಕೃತಿಯ ಮುಂದಿನ ಭಾಗ, ಕಳವೆ ಕೃಷಿ ಪ್ರವಾಸ ಕಥನದ ಎರಡನೇ ಕೃತಿಯಾಗಿದೆ.

ಹೊಲ, ಹಳ್ಳಿಗಳಲ್ಲಿ ಕುರಿತು ರೈತರ ಜೊತೆ ಮಾತಾಡುತ್ತ ಹೋದ ಕಳವೆ ನಾವು ಅರಿಯದ ವಿಶೇಷಗಳ ದರ್ಶನ ಮಾಡಿಸಿದ್ದಾರೆ. ಸರಣಿ ಆತ್ಮಹತ್ಯೆ, ಬರ, ಅಕಾಲಕ ಮಳೆ ಪರಿಣಾಮದಿಂದಾಗಿ ಕೃಷಿ ಬದುಕು ಸಂಕಟದಲ್ಲಿದೆ. ಸೋಲಿನ ಕತೆ ಹೇಳುವುದಷ್ಟೇ ನಮ್ಮ ಕೆಲಸವಲ್ಲ, ಬದುಕಿನ ದಾರಿ ತೋರಿಸುವದೂ ಅಗತ್ಯವಿದೆ. ಮನೆಮಂದಿಯೆಲ್ಲ ಕುಳಿತು ದಿನವೂ ಒಂದೊಂದೇ ‘ತುತ್ತಿನ ಕತೆ’ ಓದಿದರೆ ಅನ್ನದ ಅರಿವಾಗಬಹುದು. ಗ್ರಾಮದ ಹೋಲದೆಡೆಯಿಂದ ಎತ್ತಿ ತಂಡ ಬರಹಗಳವು. ನಾಡಿನ ರೈತರು ಕಳವೆಯವರ ಮೂಲಕ ಒಂದಿಷ್ಟು ಕೃಷಿ ಬೆಳಕಿನ ಬೀಜಗಳನ್ನು ನಮಗೆಲ್ಲ ಕಳಿಸಿದ್ದಾರೆ. ಇವನ್ನು ನಮ್ಮ ಮಿದುಳಿನಲ್ಲಿ ಊರುವ ಪರಿಣಾಮಕಾರಿ ಕಾರ್ಯಕ್ಕೆ ಕಳವೆ ಕೈಹಾಕಿದ್ದಾರೆ. ‘ಒಂದು ತುತ್ತಿನ ಕತೆ’ ಕೃಷಿ ಜಾಗೃತಿ ಮೂಡಿಸುವ ಒಂದು ಪರಿಣಾಮಕಾರಿ ಪ್ರಯತ್ನವಾಗಿದೆ.

  • Book Format: Paperback
  • Author: Shivanand Kalave
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.