Only logged in customers who have purchased this product may leave a review.

ಪದ ಪದರ
$3.27 $2.94
ಪದ ಪದರ:
ವಿಶ್ವನಾಥ ಸುಂಕಸಾಳರು ವಿದ್ಯಾರ್ಥಿಯಾಗಿದ್ದಾಗಲೇ ಬರೆಯುತ್ತಿದ್ದರು. ನಾನು ‘ಕನ್ನಡಪ್ರಭ’ದಲ್ಲಿದ್ದಾಗ ಇವರಿಂದ ‘ಪದ ಪದರ’ವೆಂಬ ಅಂಕಣವನ್ನು ಬರೆಯಿಸಿದ್ದೆ. ಅದು ಸಾಕಷ್ಟು ಜನಪ್ರಿಯವೂ ಆಗಿತ್ತು. ಕನ್ನಡದ ಮಟ್ಟಿಗೆ ಇದು ವಿಶಿಷ್ಟವಾದ ಬರಹ. ಸುಂಕಸಾಳ ಅವರು ಕಾಲೇಜಿನಲ್ಲಿ ಓದುವ ಸಮಯದಲ್ಲಿ ನನಗೆ ಆಗಾಗ ವಕ್ರತುಂಡೋಕ್ತಿಗಳನ್ನು ಕಲಿಸುತ್ತಿದ್ದರು. ಅವರು ಹಾಗೆ ಕಳಿಸಿದ ಅವೆಷ್ಟೋ ವಕ್ರತುಂಡೋಕ್ತಿಗಳನ್ನು ನಾನು ಪ್ರಕಟಿಸಿದ್ದುಂಟು.
ಅವರ ಬರಹಗಳನ್ನು ಓದಿ ಒಬ್ಬ ಅಪರೂಪದ ಪತ್ರಕರ್ತ ತಯಾರಾಗುತ್ತಿದ್ದಾನೆ ಎಂದು ನನ್ನ ಅನೇಕ ಸಹೋದ್ಯೋಗಿ ಮಿತ್ರರ ಮುಂದೆ ಹೇಳಿದ್ದುಂಟು. ಅವರ ಭಾಷಾ ಪ್ರೌಢಿಮೆ, ಬರಹದ ಸಂಯಮ, ಹದ, ತಿಳಿಯಬೇಕೆಂಬ ತುಡಿತ ಅವರ ಬಗ್ಗೆ ಕುತೂಹಲ ಮೂಡಿಸಿತ್ತು. ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಬಳಿಕ ನೇರವಾಗಿ ನಮ್ಮ ಸುದ್ದಿಮನೆಗೆ ಬನ್ನಿ ಎಂದು ಹೇಳಿದ್ದೆ. ಆದರೆ ಅವರು ಬರೆಯಲು ನೀವಂತೂ ಜಾಗ ಕೊಡುತ್ತೀರಿ. ನಾನು ಮೇಷ್ಟರಾಗುತ್ತೇನೆ. ಎಂದರು. ಹೊರರಾಜ್ಯದಲ್ಲಿದ್ದರೂ ಬರೆಯುವುದನ್ನು ಅವರು ಬಿಟ್ಟಿಲ್ಲ. ಅಲ್ಲಿಂದಲೇ ನಿತ್ಯವೂ ಅವರು ಬರೆಯುತ್ತಾರೆ. ಭರವಸೆ ಮೂಡಿಸುವ ಲೇಖಕರೆಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ವಿಷಯವನ್ನಾದರೂ ಓದಿಸಿಕೊಂಡು ಹೋಗುವಂತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ.
-ವಿಶ್ವೇಶ್ವರ ಭಟ್,
ನಾನು ಆಸಕ್ತಿಯಿಂದ ಓದುವ ಲೀಖಕರಲ್ಲಿ ವಿಶ್ವನಾಥ ಸುಂಕಸಾಳರು ಒಬ್ಬರು. ಪದಗಳ ಜೊತೆ ಅವರು ನಡೆಸುವ ಚಕ್ಕಂದ ಓದಲು ಚಂದ. ಪನ್ ಎಲ್ಲರಿಗೂ ಒಲಿಯುವುದಿಲ್ಲ. ಅದನ್ನು ಚೆನ್ನಾಗಿ ಬಳಸುತ್ತಿರುವ ಕೆಲವೇ ಯುವಲೇಖಕರಲ್ಲಿ ವಿಶ್ವನಾಥ ಸುಂಕಸಾಳರು ಮುಖ್ಯರು. ಅವರು ಎಲ್ಲಿದ್ದರೂ ಅವರ punಜಾಬ್ ಹೀಗೆ ಇರಲಿ ಎಂದು ಹಾರೈಸುವೆ.
-ಎಚ್. ಡುಂಡಿರಾಜ್
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.