ಅಧಿಕಾರಕ್ಕಾಗಿ ದೇಶದ ಹಿತಾಸಕ್ತಿಗೆ ಬೆಂಕಿ ಹಚ್ಚುವ ನಾಯಕರು, ಹಿಂಬಾಲಕರು, ಪುಂಡ ಸೇನೆಗಳು, ಉಗ್ರರ ಗುಪ್ತದಳಗಳು, ಹಿಂಸಾವಿಹಾರಿಗಳು, ದುಡ್ಡಿಗಾಗಿ ಓಟು ಮಾರಿಕೊಂಡು, ಮುಂಬರುವ ಆಪತ್ತುಗಳನ್ನು ಕಾಣದೇ, ತಾತ್ಕಾಲಿಕ ಲಾಭಕ್ಕಾಗಿ ದೇಶದ್ರೋಹಕ್ಕೆ ಬದ್ಧರಾದ ಸಮುದಾಯಗಳು, ಜಾತಿದ್ವೇಷ ಎಂಬ ಉರಿಮಾರಿ, ಮೀಸಲಾತಿಯ ಹೆಸರಿನಲ್ಲಿ ನಾಶವಾಗುತ್ತಿರುವ ಸ್ವದೇಶೀ ಪ್ರತಿಭೆಗಳು, ತಿರುಚಿದ ನಮ್ಮ ಇತಿಹಾಸ ಪಠ್ಯಗಳು, ಸ್ವವಿಸ್ಮ್ರತಿಯಲ್ಲಿ ನಮ್ಮ ಪ್ರಾಚೀನ ಸಾಧನೆಗಳನ್ನು, ವೀರರನ್ನು ಮರೆತು ಇತರರ ಅಂಧಾನುಕರಣೆಯಲ್ಲಿ ಮುಳುಗಿದ ಯುವಸಮುದಾಯಗಳು, ಪ್ರಗತಿಯನ್ನು ವಿರೋಧಿಸಿ, ಬ್ರಿಟಿಷರು ಬಿಟ್ಟು ಹೋದಾಗಿನ ದುಃಸ್ಥಿತಿಯಲ್ಲೇ ಇರಬಯಸುವ ಹತಾಶರು, ವಿದೇಶೀ ಶತ್ರುಗಳೊಡನೆ ಕೈಜೋಡಿಸಿ, ಸ್ವದೇಶ ದ್ರೋಹಕ್ಕೆ ಬದ್ಧರಾದ ರಾಜಕಾರಣಿಗಳು, ವಂಶಪಾರಂಪರ್ಯ ಅಧಿಕಾರಕ್ಕೆ ಅಂಟಿಕೊಂಡ ಪಟ್ಟಭದ್ರರು, ಒಂದಾಗಲು ಇಷ್ಟಪಡದ “ಮೈನಾರಿಟಿ”ಗಳನ್ನು ಓಲೈಸುತ್ತಾ, ದುಷ್ಟ ತುಷ್ಟಿಕರಣದ ದ್ರೋಹದಲ್ಲಿ, ಮೆಜಾರಿಟಿಯನ್ನೇ ತುಳಿಯುವ, “ಹಿಂದೂ” ಎಂದೊಡನೆ ಹೌಹಾರುವವರು, ಅದರಲ್ಲಿ “Soft-Hindusim” ಎಂಬ, ಸಲ್ಲದ, ಮಾರೀಚಭ್ರಾಂತಿಯ ಆರಾಧಕರು- ಇನ್ನೂ ನಾನಾ ತೆರನ ವಿದ್ರೋಹಿಗಳ ಜಾಲದಲ್ಲಿ ಸಿಕ್ಕುಬಿದ್ದ ನಮ್ಮ ಈ ದೇಶವನ್ನು ಈಗ ಬಿಡಿಸಲೇಬೇಕಾದ ಕಾಲ….
ಹೀಗೆ ನೂರಾರು ವಿಷಯಗಳಲ್ಲಿ, ದಿಕ್ಕುಗಳಲ್ಲಿ, ಪ್ರವಾಹಗಳಲ್ಲಿ, ನವಭಾರತ ನಿರ್ಮಾಣ ಕಾರ್ಯಕ್ಕೆ ನಾವು ಕಟಬದ್ದರಾದ ಹೊರತು ರಾಷ್ಟ್ರೋತ್ಥಾನ ಸಾಧ್ಯವಿಲ್ಲ. ರಾಷ್ಟ್ರೋತ್ಥಾನ ಎಂಬುದು ಅಪರಾಧವಲ್ಲ. ನೇಹ್ರೂ ಇದಕ್ಕೆ “Revivalism” ಎಂದು ಹೆಸರಿಟ್ಟು, “ಇದು ಪ್ರತಿಗಾಮೀ ಯತ್ನ, ಇದು ಕೊಡದು, ಅಪಾಯಕರ” ಎಂಬ ಕೂಗೆದ್ದು, ಇತರರನ್ನೂ ಪ್ರಚೋದಿಸಿ, ಇದನ್ನು “Hindu” ಎಂದು ಮುದ್ರೆ ಹಾಕಿ, ದಾರಿ ತಪ್ಪಿಸಿದರು. ಸಾಯಲಿರುವವನು, ಬದುಕಲು ಯತ್ನಿಸುವುದೇ ತಪ್ಪೆ? ಚಿಕಿತ್ಸೆಯೇ ತಪ್ಪೆ? ಆರೋಗ್ಯದ ಗುರಿಯೇ ತಪ್ಪೆ? ತುಳಿತವೇ ನ್ಯಾಯವೇ? ಅದೇ ಸಹಜವೇ? “ಇಷ್ಟು ದಿನ ಸಹಿಸಿದ್ದೀರಿ, ಇನ್ನೂ ಸಹಿಸಿ” ಎಂಬುದು “Soft Hinduism” ಎಂಬ ಪ್ರವಾದ ಇದೇ. Hindu ಎಂಬುದು Soft ಅಲ್ಲ. Hard ಅಲ್ಲ, ಲೋಕಪೋಷಕ.
Reviews
There are no reviews yet.