Only logged in customers who have purchased this product may leave a review.

ಸ್ವಾತಂತ್ರ್ಯ ಹೋರಾಟದ ಹೀರೋಗಳು-3
$3.75 $3.38
ಸ್ವಾತಂತ್ರ್ಯ ಹೋರಾಟದ ಹೀರೋಗಳು-3:
ಹಿರಿಯ ಪತ್ರಕರ್ತ, ಲೇಖಕ ಡಾ।। ಬಾಬು ಕೃಷ್ಣಮೂರ್ತಿಯವರು ವಿಜಯವಾಣಿ ಪತ್ರಿಕೆಯಲ್ಲಿ ‘ಹೋರಾಟದ ಹಾದಿ’ ಅಂಕಣ ಆರಂಭಿಸಿಲು ಮೂಲ ಕಾರಣ ಅವರೇ ಬರೆದ ‘ಅಜೇಯ’ ಓದಿನ ಮೆಲುಕು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇಂಥದೊಂದು ಲೇಖನ ಸರಣಿ ಆರಂಭಿಸುವ ಆಲೋಚನೆ ಬಂದ ಕೂಡಲೇ ಹೊಳೆದ ಏಕಮಾತ್ರ ಹೆಸರು ಬಾಬು ಕೃಷ್ಣಮೂರ್ತಿಯವರದೆ. ಅದಕ್ಕೆ ಕಾರಣ ದೇಶಭಕ್ತ ಸ್ವಾತಂತ್ರ್ಯ ಸೇನಾನಿಗಳ ವಿಷಯದಲ್ಲಿ ಅವರು ಮಾಡಿರುವ ಅಧ್ಯಯನ ಮತ್ತು ಆಸಕ್ತಿ ಅಲ್ಲದೆ ಬೇರೇನೂ ಅಲ್ಲ. ಬಾಬು ಅವರಿಗೆ ವ್ಯಯಕ್ತಿಕ ಜವಾಬ್ದಾರಿಗಳ ಜೊತೆಗೆ ವೃತ್ತಿಪರ ಕೆಲಸದ ಒತ್ತಡವೂ ಸಾಕಷ್ಟಿದೆ. ಆದರೂ ಇಂತಹ ಲೇಖನ ಸರಣಿ ವಿಷಯವನ್ನು ಮುಂದಿಟ್ಟಾಗ ಒಂದು ಕ್ಷಣವೂ ತಡಮಾಡದೆ ಒಪ್ಪಿಕೊಂಡಿದ್ದು ಅವರ ಕ್ರಿಯಾಶೀಲತೆ ಮತ್ತು ಬರವಣಿಗೆಯ ಉತ್ಸಾಹಕ್ಕೆ ನಿದರ್ಶನ ಅಂದರೆ ತಪ್ಪಾಗದು. ಅಷ್ಟೇ ಅಲ್ಲ, ನಾವು ಆಲೋಚನೆ ಮಾಡಿದ್ದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಲೇಖನ ಸರಣಿಗೆ ಹೊಸ ಆಯಾಮವನ್ನು ಕೊಟ್ಟು ನನ್ನನ್ನು ಹುರಿದುಂಬಿಸಿದರು ಅವರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆ ತಿಳಿದುಕೊಂಡು ಅಂಥವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ದೇಶವಾಸಿಗಳ ಕರ್ತವ್ಯ. ಈ ಅಂಕಣ ಅಂತಹ ವಿಶಿಷ್ಟ ಮಹನೀಯರ ಚಿತ್ರಣವನ್ನು ಕಟ್ಟಿಕೊಡುತ್ತದೆ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರರು, ಅದಕ್ಕೂ ಮುನ್ನ ಬ್ರಿಟಿಷರ ವಿರುದ್ಧ ಹೋರಾಡಿದ ಮುಂದಾಳುಗಳು, ಮತ್ತು ೧೮೫೭ರ ನಂತರದ ಮುಖ್ಯ ಸ್ವಾತಂತ್ರ್ಯ ಸೇನಾನಿಗಳ ಕುರಿತು ವಿವರ ನೀಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಮೂರು ಮಜಲುಗಳನ್ನು ಕಟ್ಟಿಕೊಡುವುದು ಈ ಅಂಕಣದ ವಿಶೇಷತೆ. ಇಲ್ಲಿನ ಕೆಲ ಹೆಸರುಗಳು ಪರಿಚಿತವಾಗಿದ್ದರೆ ಇನ್ನು ಕೆಲವು ಚರಿತ್ರೆಯ ಪುಟಗಳು ಅಷ್ಟು ಕಣ್ಣಿಗೆ ಕಾಣದಂಥವು. ಈಗಾಗಲೇ ಒಂದು ವರ್ಷ ಪೂರೈಸಿರುವ ಈ ಅಂಕಣ ಅಪಾರ ಜನಪ್ರಿಯತೆಯನ್ನೂ ಪಡೆದಿವೆ. ವಿಪುಲ ಮಾಹಿತಿ ಸಂಗ್ರಹ, ಅಧ್ಯಯನಕ್ಕೆ ಸಾಕ್ಷಿಯಂತಿರುವ ವಿಶಿಷ್ಟ ಶೈಲಿಯ ಈ ಲೇಖನಗಳು ಒಂದೇ ಉಸಿರಿಗೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿವೆ. ಇದು ಇತಿಹಾಸದ ಆಸಕ್ತರಿಗೆ, ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಆಕರ ಸಂಗ್ರಹ ಕೂಡ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.