Only logged in customers who have purchased this product may leave a review.

ತಿಳಿರು ತೋರಣ -ಪರ್ಣಮಾಲೆ-1
$3.00 $2.70
ತಿಳಿರು ತೋರಣ -ಪರ್ಣಮಾಲೆ-1:
ಓಬಿರಾಯನ ಕಾಲದಿಂದ ಅಂದ್ರೆ 2002ರಿಂದ ‘ಹೊರಗಿದ್ದುಕೊಂಡು ಕನ್ನಡ ಓದುಗರಿಗೆ ಒಳಗಿನವರೇ’ ಆಗಿರುವ ಶ್ರೀವತ್ಸ ಜೋಶಿ ಅವರ ಲೇಖನಿಯು (ಅಥವಾ, ಕೀಬೋರ್ಡ್ ಎನ್ನೋಣವೆ?) ಮತ್ತೊಮ್ಮೆ ಹೆತ್ತ ಅವಳಿ ಮಕ್ಕಳು ಈಗ ನಿಮ್ಮ ತೆಕ್ಕೆಗೆ ಬಿದ್ಧಿವೆ. ತಾಯಿ ಮಕ್ಕಳು ಅರೋಗ್ಯ!
ಒನ್ಇಂಡಿಯ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ ಮತ್ತು ಇದೀಗ ವಿಶ್ವವಾಣಿ ಪತ್ರಿಕೆಗಳ ಮೂಲಕ ಸತತ ಹದಿನಾರು ವರ್ಷ ಸಾಪ್ತಾಹಿಕ ಅಂಕಣ ಬರಹಗಳನ್ನು ನಾಟಿ ಮಾಡುತ್ತ ಬಂದಿರುವ ಪ್ರಗತಿಪರ ಕೃಷಿಕರು ಅವರು. ಅವರ ಗದ್ದೆಯಲ್ಲಿ ಬೆಳೆದ ಹೊಸ ಫಸಲು ಕನ್ನಡ ಪುಸ್ತಕಪ್ರಿಯರ ಅಂಗೈಗಳನ್ನು ಅಲಂಕರಿಸಿದೆ. ಇದು ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪಾಡಿ ಸ್ಮಾಟ್ ಮಾಧ್ಯಮಗಳಲ್ಲಿ ಕಂತುಕಂತಾಗಿ ಕಂಗೊಳಿಸಿರುವಂಥದೇ ಆದರೂ ಹೀಗೆ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ಖುಷಿಯೇ ಬೇರೆ ಅಲ್ಲವೇ?
‘ಬತ್ತದ ಉತ್ಸಾಹ ಎಲ್ಲರಲ್ಲೂ ಇರಲಿ’ ಎನ್ನುವುದು ಜೋಶಿ ಅವರ ಟ್ಯಾಗ್ ಲೈನ್. ಈ ಟ್ಯಾಗ್ ಲೈನ್ ಮತ್ತು ಕ್ಯಾಚ್ ಲೈನ್ ಗೆ ಬದ್ಧರಾಗಿ ಅವರು ಹೊರತಂದ ವಿಚಿತ್ರಾನ್ನ, ಒಲವಿನ ಟಚ್, ನಲಿವಿನ ಟಚ್, ಗೆಲುವಿನ ಟಚ್ ಮುಂತಾದ ಎಂಟು ಕೃತಿಗಳ ಮುಂದುವರೆದ ಭಾಗವೇ ‘ತಿಳಿರು ತೋರಣ’ ಪರ್ಣಮಾಲೆ! ಈ ಬೆನ್ನುಡಿಯ ಮೂಲಕ ನಾನವರ ಬೆನ್ನು ತಟ್ಟುತ್ತಿರುವುದಕ್ಕೆ ಕಾರಣ ಅವರ ಆಸ್ಟಲಿತ ದೈರ್ಯವಾಕ್ಯ…….
ಮಾಹಿತಿ, ಮನೋರಂಜನೆ ಸಾಧ್ಯವಾದರೆ ಒಂಚೂರು ವಿವೇಕ!
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.