Only logged in customers who have purchased this product may leave a review.

ತಿಳಿರು ತೋರಣ -ಪರ್ಣಮಾಲೆ-3
$3.00 $2.70
ತಿಳಿರು ತೋರಣ -ಪರ್ಣಮಾಲೆ-3:
ಇಂಗ್ಲಿಷ್ ಸಾಹಿತ್ಯಲೋಕದ ಸೊಗಸೇನೆಂದರೆ ಅಲ್ಲಿ ವೈವಿಧ್ಯಮಯ ವಿಚಾರಗಳನ್ನು ಕುರಿತ ಪುಸ್ತಕಗಳು ಪ್ರಕಟವಾಗುತ್ತಿರುತ್ತವೆ. ಸಾಹಿತ್ಯ ಅಂದರೆ ಕೇವಲ ಕತೆ,ಕಾದಂಬರಿ, ಕವಿತೆ, ವಿಮರ್ಶೆ ಅಷ್ಟೇ ಅಲ್ಲ. ನಮ್ಮಲ್ಲೂ ಡಿವಿಜಿ, ಜಿ.ಪಿ.ರಾಜರತ್ನಂ, ಶಿವರಾಮ ಕಾರಂತ ಇವರೆಲ್ಲ ಯಾವ್ಯಾವುದರ ಬಗ್ಗೆಯೋ ಸಲೀಸಾಗಿ ಬರೆದುಬಿಡುತ್ತಿದ್ದರು. ಕನ್ನಡದಲ್ಲಿ ಹೀಗೆ ನಾವ್ಯಾರೂ ಮುಟ್ಟದ ಸಂಗತಿಗಳನ್ನು ಕುರಿತು ಬರೆಯುವವರಲ್ಲಿ ಶ್ರೀವತ್ಸ ಜೋಶಿ ಒಬ್ಬರು. ಅವರ ನೆನಪಿನ ಶಕ್ತಿ ಮತ್ತು ವಿಷಯವಿಸ್ತಾರವೂ ಅಚ್ಚರಿ ಹುಟ್ಟಿಸುವಂತಿದೆ. ಅದಕ್ಕೆ ಬೇಕಾದ ಅಧ್ಯಯನ ಶೀಲತೆಯೂ ಅವರಲ್ಲಿದೆ. ಇಲ್ಲಿಯ ಯಾವದೆ ಒಂದು ಲೇಖನ ಓದಿದರೂ ಅದರಲ್ಲಿ ನಿಮಗೆ ಎಷ್ಟೋ ವಿಷಯಗಳು ಗೊತ್ತಾಗುತ್ತವೆ; ಆಲೋಚನೆಗಳು ಮನಸ್ಸಿಗೆ ಹೊಳೆಯುತ್ತವೆ. ‘ನಾವು ಇಲ್ಲಿಯತನಕ ಇದನ್ನು ಗಮನಿಸಿಯೇ ಇರಲಿಲ್ಲವಲ್ಲ!’ ಎಂದು ಅನಿಸುವುದೂ ಇದೆ. ಒಟ್ಟಾರೆಯಾಗಿ ಓದುಗರನ್ನು ಅವಾಕ್ಕಾಗಿಸುವ, ಹೊಸ ವಿಚಾರಗಳನ್ನು ಅರಿಯುವಂತೆ ಮಾಡುವ ಅನೇಕ ಸಂಗತಿಗಳು ನಿಮಗೆ ಇಲ್ಲಿ ಸಿಗುತ್ತವೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.