Only logged in customers who have purchased this product may leave a review.
ವಿ. ಕೃ. ಗೋಕಾಕ್ ಅವರ ಸಮರಸವೇ ಜೀವನ
$7.83 $7.06
ವಿ. ಕೃ. ಗೋಕಾಕ್ ಅವರ ಸಮರಸವೇ ಜೀವನ:
ಸಾಹಿತ್ಯ ಪ್ರಕಾಶನವು ಇದೀಗ ಪ್ರಕಟಿಸಿದ ಡಾ। ವಿ. ಕೃ. ಗೋಕಾಕರ ‘ಸಮರಸವೇ ಜೀವನ’ ಕಾದಂಬರಿಯ ಸಂಕ್ಷಿಪ್ತ ಇಂಗ್ಲೀಷಿನಲ್ಲಿ 1991ರಲ್ಲಿ ಪ್ರಕಟವಾದ ‘The Agony and the Glory’ ಎಂಬ ಕೃತಿಯ ಅನುವಾದವಾಗಿದೆ. ಸಮರಸವೇ ಜೀವನ ಮಹಾ ಕಾದಂಬರಿಯ ಇಂಗ್ಲಿಷ್ ಸಂಕ್ಷಿಪ್ತ ಅನುವಾದವೇ ‘The Agony and the Glory’ಯಾಗಿದೆ. ಇದನ್ನು ಕನ್ನಡಕ್ಕೆ ತಂದವರು ಶ್ರೀ ಮಧುಕರ ಕೋಣನತಂಬಿಗಿ ಅವರು.
1956ರಲ್ಲಿ ‘ಸಮರಸವೇ ಜೀವನ’ ಎಂಬ ಶೀರ್ಪಿಕೆಯಡಿ 1320 ಪುಟಗಳ ಈ ಮಹಾಕಾದಂಬರಿ ಪ್ರಕಟಗೊಂಡಿತ್ತು. ಇದರಲ್ಲಿ ಆರು ಭಾಗಗಳಿವೆ. ಮುಂದೆ ೭ನೇಯ ಭಾಗವು ಇಂಗ್ಲೀಷಿನಲ್ಲಿ ‘Narahari-The prophet of New India’ ಎಂಬ ಶೀರ್ಷಿಕೆಯಡಿ 1972ರಲ್ಲಿ ಪ್ರಕಟವಾಯಿತು. ಅದನ್ನು ಕನ್ನಡಕ್ಕೆ ಪ್ರೊ. ರಾಮಕೃಷ್ಣ ಎಂಬವರು ಅನುವಾದ ಮಾಡಿದರು. ಅದರ ಶೀರ್ಷೆಕೆ ‘ನರಹರಿ: ನೂತನ ಯುಗದ ಪ್ರವಾದಿ’ ಎಂಬುದಾಗಿದೆ. ಇದು 382 ಪುಟಗಳುಳ್ಳ ಕಾದಂಬರಿ. ೭ನೇ ಭಾಗವನ್ನು ಸೆರಿಸಿ, ‘ಸಮರಸವೇ ಜೀವನ’ ಕಾದಂಬರಿ 1700 ಪುಟಗಳಾಗುತ್ತವೆ.
ಇಂದಿನ ದಿನಗಲ್ಲಿ ಇಷ್ಟು ದೊಡ್ಡ ಕಾದಂಬರಿಯನ್ನು ಓದುವವರ ಸಂಖ್ಯೆ ತೀರ ಕಡಿಮೆ. ಆದ್ದರಿಂದ ಅದರ ಸಂಕ್ಷಿಪ್ತ ರೂಪವನ್ನು ಸಿದ್ಧಪಡಿಸಿ ಓದುಗರಿಗೆ ಮುಟ್ಟಿಸುವ ಪ್ರಯತ್ನವು ಇದಾಗಿದೆ. ಶ್ರೀ ಮಧುಕರ ಕೋಣನತಂಬಿಗಿ ಅವರು ಬಹಳ ಆಸ್ಥೆಯಿಂದ ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
- Book Format: Printbook
- Author: V K Gokak
- Category: Articles
- Language: Kannada
- Publisher: Sahitya Prakashana
Reviews
There are no reviews yet.