‘ಸುಬ್ರಹ್ಮಣ್ಯ, ಅದು ಒಳಗ ಕಪಾಟಿನ್ಯಾಗ ಅದ ತೊಗೊ, ಅದನ್ನು ಮಾಡಿಬಿಡು. ಕಾರ್ಯಕ್ರಮ ಮಾಡಿಬಿಡ್ರಿ. ನಾನು ಇಲ್ಲೇ ಇದ್ದು ಸೂಕ್ಷ್ಮ ಮನಸಿನಿಂದ ಗ್ರಹಿಸ್ತೀನಿ, ನನ್ನ ಸಲುವಾಗಿ ಕಾಯ್ಯಬ್ಯಾಡ್ರಿ, ಮಾಡಿಬಿಡ್ರಿ ಕಾರ್ಯಕ್ರಮ’ ಅಂದರು…
ಈಗ 25 ದಿನಗಳ ಹಿಂದೆ ನಮ್ಮ ವೇದಿಕೆಗೆ ಬರೆದುಕೊಟ್ಟಿದ್ದ 17 ಸಾವಿರ ರೂಪಾಯಿಗಳ ಚೆಕ್ಕ ಅವರು ಕೊನೆಯದಾಗಿ ಸಂದಾಯ ಮಾಡಿದ್ದೆಂದು ಕಾಣುತ್ತದೆ. ಈಗೇನಿದ್ದರೂ ನಮ್ಮ ಕಾರ್ಯಕ್ರಮದಲ್ಲಿ ಆ ಮುಂದಿನ ಅವರ ಕುರ್ಚಿ ಖಾಲಿ, ಆ ಖಾಲಿ ಕುರ್ಚಿಯ ತುಂಬೆಲ್ಲ ಅವರ ನೆನಪು. ಅದರಲ್ಲಿ ಸ್ಫೂರ್ತಿ, ಹಾಸ್ಯ, ಲವಲವಿಕೆ, ಅಧ್ಯಯನ, ಚರ್ಚೆ, ವಿದ್ವತ್ತುಗಳನ್ನೆಲ್ಲ ಅಧ್ಯಾತ್ಮದ ಚೀಲದಲ್ಲಿ ಕಟ್ಟಿಕೊಟ್ಟಂತಹ ಅವರದೊಂದು ನೆನಪು ಮಾತ್ರ, ಕನ್ನಡಕ್ಕೆ ಎಂಟು ಜ್ಞಾನಪೀಠ, ಒಂದು ಸರಸ್ವತಿ ಸಮ್ಮಾನ, ಅಷ್ಟೇ ಏಕೆ, ಇನ್ನೂ ಹತ್ತಾರು ಇಂಥವನ್ನು ತರುವವರು ಬಂದಾರು. ಆದರೆ, ಮುಂದೆಂದೂ ಈ ನೆಲದಲ್ಲಿ ಮತ್ತೊಬ್ಬ ಶ್ರೀನಿವಾಸ ತೋಫಖಾನೆ ಹುಟ್ಟಲಾರನಲ್ಲ ಎಂಬುದೇ ಅತ್ಯಂತ ನೋವಿನ ಸಂಗತಿ.
Reviews
There are no reviews yet.