ಪರಭಾರೆಯಾಗಿ ದಿವಾಳಿಯೆದ್ದು ಹೋಗಿದ್ದ ಪತ್ರಿಕಾಸಂಸ್ಥೆಯನ್ನು ಸತತ ಹೋರಾಟ, ಅವಿರತ ಶ್ರಮಗಳ ಫಲವಾಗಿ ಮೇಲೆತ್ತಿದ ಧೀಮಂತ. ಸಂಯುಕ್ತ ಕರ್ನಾಟಕ ಅಂದ್ರೆ ಶಾಮರಾಯರು, ಶಾಮರಾಯರೆಂದರೆ ಸಂಯುಕ್ತ ಕರ್ನಾಟಕ ಎನ್ನುವ ರೀತಿಯಲ್ಲಿ ಕರುಳ ಸಂಬಂಧಿಗಳಂತೆ ಬೆಳೆದವರು, ಸಂಸ್ಥೆಯನ್ನು ಬೆಳೆಸಿದವರು. ಈ ಅವಧಿಯಲ್ಲಿ ಕರ್ನಾಟಕ ರಾಜಕಾರಣ ಹಾಗೂ ಸಮಾಜಕಾರಣವನ್ನು ತಮ್ಮ ನೆಲೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವಯುತವಾಗಿ ರೂಪಿಸಲು ಶ್ರಮಿಸಿದ ಅಪರೂಪದ ಸಾಹಸಿ ಪತ್ರಕರ್ತರು. ಅಲ್ಲದೇ ಒಂದೆರಡು ತಲೆಮಾರಿನ ಪತ್ರಕರ್ತರನ್ನು ರೂಪಿಸಿದ ವೃತ್ತಿಶ್ರೇಷ್ಠರು. ‘ಸಂಜಯ’ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಶಾಮರಾಯರು ತಮ್ಮ ಬದುಕಿನ ಪುಟಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಕನ್ನಡ ಪತ್ರಿಕೋದ್ಯಮದ ಸುದೀರ್ಘ ಪಯಣದಲ್ಲಿ ಮಹತ್ವದ ದೀಪಗಂಬವಾಗಿ ಕಂಗೊಳಿಸುವ ಶಾಮರಾಯರು. ಪೂರ್ಣಗೊಳಿಸದ ಅರ್ಧಕ್ಕೇ ನಿಲ್ಲಿಸಿದ ಆತ್ಮಕತೆಯನ್ನು ಸಂಗ್ರಹಿಸಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ಈ ಕೃತಿಯ ಕೊರತೆಯಾದರೂ, ರಾಯರು ಹೇಳಿದ ಸಂಗತಿಗಳೇ ಅನನ್ಯತೆಯನ್ನು ಮೆರೆದು ಅವರ ಧೀಮಂತ ವ್ಯಕ್ತಿತ್ವದ ಬಗ್ಗೆ ಅಭಿಮಾನ, ಹೆಮ್ಮೆ ಮೂಡುವಂತೆ ಮಾಡುತ್ತದೆ.

ಸಂಜಯ ಉವಾಚ(ಪತ್ರಕರ್ತ ಕೆ.ಶಾಮರಾವ್ ಅವರ ಆತ್ಮಕತೆ)
Sale!
ಸಂಜಯ ಉವಾಚ(ಪತ್ರಕರ್ತ ಕೆ.ಶಾಮರಾವ್ ಅವರ ಆತ್ಮಕತೆ)
$3.41 $3.07
ಪತ್ರಿಕಾರಂಗದ ಭೀಷ್ಮ ಎಂದು ತಮ್ಮ ಜೀವಿತಕಾಲದಲ್ಲಿಯೇ ಕರೆಯಿಸಿಕೊಂಡ ಕಡಲಬಾಳು ಶಾಮರಾಯರ ಕತೆಯಂದರೆ, ಆರು ದಶಕಗಳ ‘ಸಂಯುಕ್ತ ಕರ್ನಾಟಕ’ದ ಕತೆಯು ಹೌದು, ಕನ್ನಡ ‘ಪತ್ರಿಕೋದ್ಯಮ’ದ ಕತೆಯು ಹೌದು. ‘ಸಂಯುಕ್ತ ಕರ್ನಾಟಕ’ದೊಂದಿಗೆ ಬೆಳೆಯುತ್ತಾ, ಆ ಪತ್ರಿಕೆಯನ್ನು ಬೆಳೆಸಿದವರು ಅವರು.
- Book Format: Printbook
- Category: Biography
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.