ಅವರ ಬದುಕು ನಮಗೆ ಬೆಳಕು:
… ರಾತ್ರಿ ವೇಳೆಯಲ್ಲಿ ಮನೆಯ ಕಿಟಕಿಯಿಂದ ಹೊರಗೆ ಕಣ್ಣು ಹಾಕಿ ನೋಡುವವರಿಗೆ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು ಕಾಣಿಸುತ್ತವೆ. ಅವರ ದೃಷ್ಟಿ ಮೇಲೆ ಆಕಾಶದ ಕಡೆಗೆ ಹೋಗದೆ, ಕೆಳಗೆ ಭೂಮಿಯ ಕಡೆಗೆ ಬಿದ್ದರೆ, ಅವರಿಗೆ ಬೀದಿಯ ರಚ್ಚೆಯೊಂದೇ ಕಾಣಿಸುತ್ತದೆ.
ಒಳ್ಳೆಯ ಜನರು ಶ್ರುತಿ ಮಾಡಿಟ್ಟ ವೀಣೆಯಂತೆ, ಎಲ್ಲ ಕಾಲಗಳಲ್ಲಿಯೂ ಮಧುರ ಸ್ವರವನ್ನು ಹೊರಡಿಸುತ್ತಲೇ ಇರುತ್ತಾರೆ. ತಮ್ಮಲ್ಲಿರುವ ಶ್ರೇಷ್ಠತೆಯನ್ನು ಅವರು ನಿರ್ವಚನೆಯಿಂದ ಸಾರ್ವಜನಿಕರಿಗೆ ನೀಡುತ್ತಲೇ ಇರುತ್ತಾರೆ. ಮೋಡ ಮುಸಿಕಿದೆಯೆಂದು ಸೂರ್ಯನು ತಾನು ಬೆಳಗುವುದನ್ನು ನಿಲ್ಲಿಸುವುದಿಲ್ಲ. ಆ ಮೋಡ ಮುಗಿಲನ್ನು ಮುಚ್ಚಿಕೊಂಡಿರುವುದಿಲ್ಲ. ಅದು ಸರಿದು ಹೋದಾಗ, ಸೂರ್ಯ ಪ್ರಕಾಶ ಹೊರಗೆ ಬಂದು ಬೆಳಗುತ್ತದೆ.
ಅವರು ಚಿನ್ನದಂಥ ಮನುಷ್ಯರೆಂದರೂ, ಅವರು ಚಿನ್ನಕ್ಕಿಂತ ಹೆಚ್ಚು ಬೆಳೆಯಾದವರು. ಭಂಡಾರದ ಎಲ್ಲ ನಿಧಿಗಿಂತಲೂ ಹೆಚ್ಚು ಬೆಳೆಯಾದವರು. ಅವರು, ಮಾರ್ಗಸೂಚೀ ಕೈ ಮರಗಳಂತೆ ಮನುಜ ಕುಲಕ್ಕೆ, ಅದು ನಡೆದು ಹೋಗುವ ದಾರಿಯನ್ನು ನಿರಂತರವೂ ತೋರಿಸುತ್ತಲೇ ಇದ್ದಾರೆ. ಅವರ ಬದುಕು, ನಮಗೆಲ್ಲ ಬೆಳಕೆನಿಸುವಂತೆ, ಸದಾ ಪ್ರಜ್ವಲಿಸುತ್ತಲೇ ಇರುತ್ತವೆ.
Reviews
There are no reviews yet.