ವೈರಿಗೆ ಜೀವದಾನ ಮಾಡಿದ ಪೈಗಂಬರರ ವೀರ ಔದಾರ್ಯ, ತನ್ನ ನೆಚ್ಚಿನ ಪತ್ರಿಕೆಯ ರಕ್ಷಣೆಗಾಗಿ ಸಂಗ್ರಹಿತ ಹಣವನ್ನು ದಾನವಾಗಿ ಕೊಟ್ಟ ಬಾಲಕ ಜಮುನಲಾಲ್ ಬಜಾಜ್ ರ ದೇಶಪ್ರೇಮ, ತಾಯಿ ತಂದೆಗಳ ರಕ್ಷಣೆಗಾಗಿ ಕರಡಿಯ ಬಾಯಿಗೆ ಬಲಿಯಾಗಲು ಸಿದ್ಧರಾದ ಮಹಾತ್ಮಾ ಗಾಂಧೀಜಿಯವರ ನಿಲುವು, ಬ್ರಿಟಿಷ್ ಸಾಮ್ರಾಜ್ಯದ ಕರಾಳ ನೀತಿಗೆ ವಿರುದ್ಧ ಸೆಣಸ ನಿಂತ ಸಾವರ್ಕರರ ಉಜ್ವಲ ರಾಷ್ಟ್ರಾಭಿಮಾನ ಈಶ್ವರಚಂದ್ರ ವಿದ್ಯಾಸಾಗರರ ಸರಳತೆ, ಮಾತೃಭೂಮಿಗಾಗಿ ನಗುನಗುತ್ತಾ ಶೂಲಕ್ಕೇರಿದ ಭಗತ್ ಸಿಂಗ್ ರ ಉಜ್ವಲ ದೇಶಭಕ್ತಿ, ತನ್ನ ಹಲವಾರು ವರ್ಷಗಳ ಸಂಶೋಧನೆ ಸುಟ್ಟು ಬೂದಿಯಾಗಲು ಕಾರಣವಾದ ನಾಯಿಯನ್ನು ಶಿಕ್ಷಿಸದ ನ್ಯೂಟನ್ ರ ವಿಚಾರ, ಚಳಿಯಿಂದ ನಡುಗುತ್ತಿರವ ದೀನ ಹೆಣ್ಣುಮಗಳಿಗಾಗಿ ತನ್ನ ಕೋಟನ್ನೇ ಕೊಟ್ಟ ಸಿ.ಎಫ್ ಆಂಡ್ರೂಜ್ ರ ದಯಾಗುಣ, ತನ್ನ ಸ್ನೇಹಿತನಿಗೆ ರೊಟ್ಟಿಯ ದೊಡ್ಡ ತುಣುಕು, ತನಗೆ ಸಣ್ಣ ತುಂಡು ಕೊಡುಲು ತಾಯಿಗೆ ಕೇಳಿಕೊಂಡ ಬಾಲಕ ಮಹಾದೇವ ಗೋವಿಂದ ರಾನಡೆಯವರ ನ್ಯಾಯಬುದ್ಧಿ, ಸಗಣಿಯ ಕುಳ್ಳು ಹಣಕ್ಕಿಂತ ಹೆಚ್ಚು ಬೆಲೆಯುಳ್ಳದ್ದೆಂದು ಅಜ್ಜಿಯೊಬ್ಬಳಿಗೆ ತೋರಿಸಿಕೊಟ್ಟ ಸರ್. ಎಂ. ವಿಶ್ವೇಶ್ವರಯ್ಯನವರ ವೈಜ್ಞಾನಿಕ ದೃಷ್ಟಿಕೋನ, ದನಗಾಹಿತನಿಂದ ಜೀವನ ಪ್ರಾರಂಭಿಸಿ ಅಮೆರಿಕಾದ ರಾಷ್ಟ್ರಾಧ್ಯಕ್ಷ ಹುದ್ದೆಯನ್ನೇರಿದ ಅಬ್ರಹಾಂ ಲಿಂಕನ್ ರ ಸತತ ಪರಿಶ್ರಮಗಳೆಲ್ಲಾ ಅತ್ಯಂತ ರೋಚಕವಾಗಿ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ.

ಮಹಾಪುರುಷರ ಜೀವನ ಪ್ರಸಂಗಗಳು
Sale!
ಮಹಾಪುರುಷರ ಜೀವನ ಪ್ರಸಂಗಗಳು
$1.36 $1.23
ಈ ಸಂಗ್ರಹದಲ್ಲಿ ಅರವತ್ತೆರಡು ಸರಳಸುಂದರ ಘಟನೆಗಳ ವರ್ಣನೆವಿದೆ. ಒಂದೊಂದು ಘಟನೆಯೂ ಜೀವನ ಮೌಲ್ಯ, ಒಂದೊಂದು ಜೀವನಾದರ್ಶವನ್ನು, ಸೂಚ್ಯವಾಗಿ ಬೋಧಿಸುತ್ತದೆ. ಇಂದಿನ ನೈತಿಕ ಭ್ರಷ್ಟಾಚಾರದ ದಿನಗಳಲ್ಲಿ ಮಕ್ಕಳಿಗೆ ಈ ಪುಟ್ಟ ಪುಸ್ತಕ ದಾರಿದೀಪವಾಗುವದರಲ್ಲಿ ಸಂದೇಹವಿಲ್ಲ.
- Book Format: Paperback
- Category: Biography
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.