Only logged in customers who have purchased this product may leave a review.

ನಾದಾನುಸಂಧಾನ
$1.91 $1.72
ನಾದಾನುಸಂಧಾನ:
ಈ ‘ನಾದಾನುಸಂಧಾನ’ ಎಂಬ ಗ್ರಂಥ ಗುರು-ಶಿಷ್ಯ ಸಂವಾದ, ಪ್ರಶ್ನೋತ್ತರವಾಗಿ ಮೂಡಿ ಬಂದಿದೆ. ನಮ್ಮ ಆರ್ಷ ಜ್ಞಾನ ಇದೇ ಪದ್ದತಿಯಲ್ಲಿ ನಮಗೆ ಲಭ್ಯವಾಗಿದೆ. ಉಪನಿಷತ್ತುಗಳು ಗುರು-ಶಿಷ್ಯ ಸಂವಾದದಲ್ಲೇ ಇರುವುದು. ಗುರುಚರಿತ್ರೆಯೇ ಆದಿ ಗ್ರಂಥಗಳು ಪ್ರಶ್ನೋತ್ತರದಿಂದಲೇ ಇದೆ. ವೇದ-ಸಂಗೀತ ಶ್ರುತವಿದ್ಯೆ. ಶ್ರಾವಣಿಸಿಯೇ, ಕೇಳಿಯೇ ಕಲಿಯಬೇಕಾಗಿದೆ. ಓದಿಕೊಂಡು ಕಲಿಯುವ ಈ ವಿದ್ಯೆಗಳಲ್ಲ. ಆದ್ದರಿಂದ ಇದನ್ನು ಗುರು ಪರಂಪರೆಯಿಂದಲೇ ಅಭ್ಯಸಿಸಬೇಕು. ನಮ್ಮಲ್ಲಿ ನಾದ ಸಂತತಿ ಮತ್ತು ಬಿಂದು ಸಂತತಿ ಎಂಬ ಎರಡು ವಿಧಗಳಿವೆ. ಗುರು-ಶಿಷ್ಯರು ಇದು ನಾದ ಸಂತತಿ. ಸಂಗೀತವನ್ನು ಗುರುಮುಖದಿಂದ ಕೇಳಿ, ಅವಧಾನ, ಅನುಸಂಧಾನದಿಂದ ಕಲಿಯಬೇಕು. ಶಿಷ್ಯನಾದವನು ಗುರುವಿನ ಸಂತತಿಯೇ ಆಗಿರುವನು, ಸಂಗೀತ ಎಂಬುದು ಕೇವಲ ಉರು ಹಾಕುವುದಲ್ಲ. ಉರು ಹಾಕಿದ ವಿದ್ಯೆ ತೊಟ್ಟಿಯಲ್ಲಿ ತುಂಬಿಟ್ಟ ನೀರು ಇದ್ದಂತೆ. ನಾಲ್ಕು ಬಕೆಟ್ ತೆಗೆದಾಕ್ಷಣ ಮುಗಿದು ಹೋಗುತ್ತದೆ. ಆದರೆ ವಿದ್ಯೆ ಒರತೆಯಂತೆ ಇರಬೇಕು. ಅದು ಎಂದೂ ಮುಗಿಯುವುದಿಲ್ಲ. ಕೇವಲ ಗುರುಗಳು ಬಂದಿಶ್ ಗಳನ್ನು ಹೇಳಿಕೊಡುವುದು ಶಿಷ್ಯ ಬಾಯಿಪಾಠ ಮಾಡುವುದು ಇದು ನಿಜವಾದ ಸಂಗೀತ ಶಿಕ್ಷಣವಲ್ಲ. ನಿಜವಾದ ಗುರು ಸಂಗೀತದ ರಾಗಗಳ ಸ್ವರೂಪ, ರಸ, ಅದನ್ನು ಬೆಳೆಸುವ ಪದ್ಧತಿ ಮುಂತಾದ ಒಂದು ವಿಶಿಷ್ಟ ದೃಷ್ಟಿಯನ್ನು ಗುರು ಕೊಡುತ್ತಾನೆ. ವಿಚಾರ ಮಾಡುವ ಪದ್ಧತಿಯನ್ನು ಕಳಿಸುತ್ತಾನೆ. ಜಾಣನಾದ ಶಿಷ್ಯನು ತನ್ನ ಸ್ವಯಂ ಪ್ರತಿಭೆಯಿಂದ ಗುರುಗಳು ಹೇಳಿಕೊಟ್ಟ ವಿಧ್ಯೆಯನ್ನು ಬೆಳೆಸುತ್ತಾನೆ. ಸಂಗೀತವೆಂಬುದು ಕಲಿಸುವುದಕ್ಕಿಂತ ಕಲಿಯುವುದೇ ಹೆಚ್ಚಿರುತ್ತದೆ. “ಗುರೋಸ್ತು ಮೌನ ವ್ಯಾಖ್ಯಾನಂ ಶಿಷ್ಯಸ್ತು ಛಿನ್ನಸಂಶಯಾಂ” ಇದು ಆರ್ಷ ಪದ್ಧತಿ. ಗುರುಗಳ ಸತತ ಸಂಗದಿಂದ ಇದೆಲ್ಲಾ ಕಲಿಯಲಾಗುತ್ತದೆ.
- Book Format: Printbook
- Category: Biography
- Language: Kannada
- Publisher: Sahitya Prakashana
Reviews
There are no reviews yet.