Only logged in customers who have purchased this product may leave a review.

ಚಿಣ್ಣರ ಲೋಕವ ತೆರೆಯೋಣ
$0.68 $0.61
ಚಿಣ್ಣರ ಲೋಕವ ತೆರೆಯೋಣ:
ನಮ್ಮ ಹಿರಿಯ ಕವಿಗಳು ಹಿರಿಯರಿಗಲ್ಲದೆ ಕಿರಿಯರಿಗೂ ಪ್ರಿಯವಾಗುವಂತೆ ಪದ್ಯ ಬರೆಯುವುದು ಮಕ್ಕಳ ಕಾವ್ಯದ ಘನತೆಯನ್ನು ಪರೋಕ್ಷವಾಗಿ ಹೆಚ್ಚಿಸಬಲ್ಲದು. ಕುವೆಂಪು, ಬೇಂದ್ರೆ, ರಾಜರತ್ನಂ ಅವರ ಈ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ ನಂತರದ ತಲೆಮಾರಿನ ಹಿರಿಯರಲ್ಲಿ ಚೆನ್ನವೀರ ಕಣವಿಯವರು ಮುಖ್ಯರು. ನಮ್ಮ ತಲೆಮಾರಿನೊಂದಿಗೆ ನವೋದಯದ ತಲೆಮಾರನ್ನು ಸಂಬಂಧಿಸಿ ಸಂಪನ್ನವಾದ ಒಂದು ಸಂಸೃತಿಯ ಹರಿಯನ್ನು ಹರಿಗಡಿಯದಂತೆ ನೋಡಿಕೊಳ್ಳುವ ಮೂಲಕ ನಮಗೆಲ್ಲ ಕಣವಿಯವರು ಒಂದು ಆದರ್ಶವಾಗಿ ಪರಿಣಮಿಸಿದ್ದಾರೆ.
ಕಣವಿಯವರ ಮಕ್ಕಳ ಕವಿತಿಗಳಲ್ಲಿ ಕಾಣುವ ಸಹಜವೂ ಸರಳವೂ ಆದ ಭಾಷೆಯ ಬಳಕೆ, ಸುಲಲಿತವಾದ ಲಯದ ವಿನ್ಯಾಸ, ಸೃಷ್ಟಿಯ ಚರಾಚರಗಳಲ್ಲೆಲ್ಲ ಚೈತನ್ಯದ ಜೀವದಾಟವನ್ನು ಕಾಣಿಸುವ ಮಧುರವಾದ ಕಲ್ಪನಾಶೀಲತೆ ಅಪರೂಪದ್ದು. ಮಕ್ಕಳ ಬೆನ್ನು ಮೇಲೆ ಶಾಲೆಯ ಚೀಲದಂತೆ ಭಾರವಾಗಿ ಕೊಡದೆ ಅವರ ಹೆಗಲ ಮೇಲೆ ಹಗುರವಾಗಿ ಕೂತು ಚಿಲಿಪಿಲಿಸುವ ಈ ಕವಿತೆಗಳು ಮಕ್ಕಳಿಗೆ ಬಣ್ಣದ ಹಕ್ಕಿಗಳಂತೆ ಅಪ್ಯಾಯಮಾನವಾಗುವುದರಲ್ಲಿ ಏಳಷ್ಟೂ ಸಂಶಯವಿಲ್ಲ.
- Book Format: Printbook
- Category: Children Literature
- Language: Kannada
- Publisher: Sahitya Prakashana
Reviews
There are no reviews yet.