Only logged in customers who have purchased this product may leave a review.
Sale!
ಏನ್ ಕಥೆ! ಏನ್ ಕಥೆ!!
$0.82 $0.74
ಏನ್ ಕಥೆ! ಏನ್ ಕಥೆ!!
ಇತ್ತೀಚಿನ ಬ್ಯೂಸಿ ಜೀವನ ಶೈಲಿ ಮತ್ತು ಟೀವಿ ಗೀಳಿನ ಪರಿಣಾಮವಾಗಿ ತಾಯಂದಿರು, ಹಿರಿಯರು ಮೊದಲಿನಂತೆ ಮಕ್ಕಳಿಗೆ ಕಥೆಗಳನ್ನು ಹೇಳುವುದೇ ನಿಂತು ಹೋಗಿದೆ. ತಮ್ಮ ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಿ ನೌಕರಿ ಪಡೆದು ಹೆಚ್ಚು ವೇತನ ಗಳಿಸುವುದೇ ಅವರ ಪರಮ ಗುರಿ ಎನ್ನುವ ಮಣಿವಿಕಾರ ಉಂಟಾಗಿದೆ. ಹದನಾದ ಪುಟ್ಟ ಮಕ್ಕಳ ಮೆದುಳಿಗೆ ನೀತಿ, ಸಾಹಸ, ಪ್ರೇರಕ ಕಥೆಗಳನ್ನು ಬಿತ್ತಿದಾಗ ಅದು ಮುಂದೆ ಬೆಳೆಯುವ ಬೆಳೆಯೇ ಅಗಾಧ, ಅನುಪಮ. “ಮೊದಲು ಮಾನವನಾಗು” ಎನ್ನುವ ಕವಿಯ ಆಶಯದಂತೆ ಅವರ ಬಾಳು ಹರಹುಗೊಂಡು ವಿಶ್ವಚೇತನವಾದೀತು. ಹೆಚ್ಚಿನ ಕಾಲವನ್ನು ವ್ಯಯಿಸದಂತಹ ನಾನೆ ಬರೆದ ಹಲವು ಪುಟ್ಟ ಪುಟ್ಟ ಕಥೆ ಹಾಗು ಪ್ರೇರಕ ಪ್ರಸಂಗಗಳು ಈ ಸಂಕಲನದಲ್ಲಿ ಸಂಗ್ರಹಿತಗೊಂಡಿವೆ. ಇವುಗಳನ್ನು ಹಿರಿಯರು ಓದಿ ಮಕ್ಕಳಿಗೂ ಹೇಳಬಹುದು ಇಲ್ಲವೇ ಮಕ್ಕಳೇ ಓದಿ ತಿಳಿಯಬಹುದು. ಅಷ್ಟು ಸರಳವಾಗಿವೆ. ಇನ್ನು ಸಾಗಲಿ ಕಥೆಗಳ ಓದು….
- Book Format: Printbook
- Author: Gururaj Benakal
- Category: Children Literature
- Language: Kannada
- Publisher: Sahitya Prakashana
Reviews
There are no reviews yet.