Only logged in customers who have purchased this product may leave a review.

ಅಚ್ಚ ಪರಿಮಳ
$1.63 $1.47
ಅಚ್ಚ ಪರಿಮಳ:
ಶಾಂತಾದೇವಿಯವರು ಸಣ್ಣಕತೆಗಳನ್ನು ಬರೆಯಲು ಆರಂಭಿಸಿದ್ದಾಗ ಆಗಲೇ ಕನ್ನಡದಲ್ಲಿ ನವ್ಯತೆ ಆರಂಭವಾಗಿತ್ತಾದರೂ ಅವರಿಗೆ ಅವರ್ಶ ಮಾದರಿಯಾಗಿ ಕಂಡದ್ದು ಮಾಸ್ತಿ ಸಂಪ್ರದಾಯ. ಉದಾರ ಮಾನವತಾವಾದಿ ದರ್ಶನದಲ್ಲಿ, ಬದುಕನ್ನು ಎಲ್ಲ ವಿವರಗಳಲ್ಲಿ ನಿರೀಕ್ಷಿಸಿ ದಾಖಲಿಸುವ ರೀತಿಯಲ್ಲಿ, ಮಾನವೀಯತೆಯ ಅನುಕಂಪದಲ್ಲಿ ನಿರುದ್ವಿಗ್ನವಾಗಿ ಕಥೆ ಹೇಳುವ ಕ್ರಮದಲ್ಲಿ, ವಾಸ್ತವವಾದಿ ಚಿತ್ರಣದಲ್ಲಿ ಮಾಸ್ತಿಯವರ ಪ್ರಭಾವ ಶಾಂತಾದೇವಿಯವರ ಕತೆಗಳ ಮೇಲೆ ದಟ್ಟವಾಗಿ ಹರಡಿಡುವುದು ಕಾಣುತ್ತದೆ. ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅದು ಅವರ ಈಚಿನ ಕತೆಗಳಲ್ಲೂ ಮುಂದುವರಿದುಕೊಂಡು ಬಂದಿದೆ. ಬದುಕಿನಲ್ಲಿ ನೋವು ಇದ್ದರೂ ಸಹನೆಯ ಮೂಲಕ, ಹೊಂದಾಣಿಕೆಯಿಂದ, ತಿಳುವಳಿಕೆಯಿಂದ, ಪ್ರೀತಿಯಿಂದ, ಅದನ್ನು ಸರಿಪಡಿಸಿಕೊಳ್ಳಬಹುದೆಂಬ ಮಾಸ್ತಿಯವರ ನಿಲುವು ಶಾಂತಾದೇವಿಯವರ ಕತೆಯಲ್ಲೂ ಕಾಣುತ್ತದೆ.
ಅವರು ನವ್ಯ ಮತ್ತು ಬಂಡಾಯ ಚಳವಳಿಗಳನ್ನು ಹಗುರಾಗಿ ಹಾದು ಬಂದಿದ್ದರೂ ತಮ್ಮ ಮೂಲ ದ್ರವ್ಯವನ್ನು ಕಳೆದುಕೊಂಡಿಲ್ಲ. ಹೃದಯವಂತ ಗ್ರಹಿಣಿಯಾಗಿ ಅವರು ಬದುಕನ್ನು ಕಂಡಿದ್ದಾರೆ, ಮತ್ತು ಅದೇ ದೃಷ್ಟಿಯಿಂದ ತಮ್ಮ ಕತೆಗಳನ್ನು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಲಾತ್ಮಕವಾಗಿ ಯಶಸ್ವಿಯಾಗಿ ಮತ್ತು ಹೆಣ್ಣಿನ ಸ್ಥಿತಿಯ ಬಗ್ಗೆ ಕೆಲವು ಕತೆಗಳನ್ನು ಕೊಟ್ಟಿದ್ದಾರೆ.
- Book Format: Printbook
- Category: Samagra Sahitya
- Language: Kannada
- Publisher: Sahitya Prakashana
Reviews
There are no reviews yet.