ಭೂತಕಾಲದಲ್ಲಿ ಬದುಕುತ್ತಿರುವ ಪಂಡಿತರೂ ಉಂಟು. ಭೂತಕಾಲವಿಲ್ಲದೆ ವರ್ತಮಾನದಲೇ ತೆವಳುವ ನವ್ಯರೂ ಉಂಟು. ಇಬ್ಬರೂ ಕಾಲ ಬಾಧಿತರಾದ ಕೂಪಮಂಡೂಕಗಳು,
ನಾಡಿಗರು ಬಾವಿಯಿಂದ ಮೇಲೆ ಜಿಗಿದರು. ಭೂತ-ವರ್ತಮಾನಗಳನ್ನು ಬೆಸೆದು ಭವಿಷ್ಯತ್ತಿನತ್ತ ಕಣ್ಣೋಡಿಸಿದರು, ಆ ನಾಡೀಗ ಈ ನಾಡೀಗ ಜತೆ ಸೇರಿ ಬಾನಾಡಿಗರಾದರು. ನಾಡಿಗರನ್ನು ಬಹಳ ಮಂದಿ ಮೆಚ್ಚದಿರುವುದು, ಮತ್ತು ನಾನು ಮೆಚ್ಚುವುದೂ ಈ ಕಾರಣಕ್ಕಾಗಿ.
ಒಂದು ಹೊಸ ಪಂಥಕ್ಕೆ ನಾಂದಿ ಹಾಡಿದ ನಾಡಿಗರಿಗೆ ಅಭಿನಂದನೆಗಳು.
Reviews
There are no reviews yet.