Only logged in customers who have purchased this product may leave a review.

ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ
$1.77 $1.59
ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ:
ಬಾಬು ಕೃಷ್ಣಮೂರ್ತಿಯವರು ಕಾದಂಬರಿಗಳಾದ ಅಜೇಯ, ಅದಮ್ಯ, ರುಧಿಯಾಬಿಷೇಕ ಕ್ರಾಂತಿಪರ್ವ ಮತ್ತು ಮಹಾಸಾಧಕ ಇವುಗಳನ್ನು ಕುರಿತು ವಿಮರ್ಶಾ ಕೃತಿ ಇದು. ಇದರೊಂದಿಗೆ ಅವರು ಅನುವಾದಿಸಿರುವ ವೀರ ಸಾವರ್ಕರ್ ಬರೆದ ೧೮೫೭ ಕೃತಿ, ಭಗತ್ ಸಿಂಗ್ ಕುರಿತು ಕನ್ನಡದಲ್ಲಿ ಲಭ್ಯವಿರುವ ಅತಿ ದೊಡ್ಡ ಜೀವನ ಚರಿತ್ರೆ ಯುಗದ್ರಷ್ಟ ಭಗತ್ ಸಿಂಗ್, ನಿಜವಾದ ಬಾರತೀಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಯಾವುದು ಚರಿತ್ರೆಯ ವಿಮರ್ಶೆಯೂ ಈ ಪುಸ್ತಕದಲ್ಲಿದೆ. ಇದರೊಂದಿಗೆ ಅವರು ದಿನಪತ್ರಿಕೆಯಲ್ಲಿ ಬರೆಯುವ ಹೋರಾಟದ ಹಾದಿ ಲೀಖನಗಳ ಪುಸ್ತಕ ರೂಪದ ಕೃತಿ, ಹೋರಾಟದ ಹೀರೋಗಳು ಎರಡು ಸಂಪುಟಗಳ ವಿಶ್ಲೇಷಣೆಯೂ ಇಲ್ಲಿ ಸೇರಿಕೊಂಡಿದೆ.
ಇದು ಬಾಬು ಅವರ ಮೇಲಿನ ಕೇವಲ ಅಭಿಮಾನದಿಂದ ವಿಮರ್ಶಕ ಡಾ. ಜಿ. ಬಿ. ಹರೀಶ ಬರೆದಿರುವ ಕೃತಿಯಲ್ಲ. ಕೇವಲ ಮೆಚ್ಚುಗೆ ಹೊಗಳಿಕೆಗಳ ಬರವಣಿಗೆಯಿಂದ ಯಾವ ಲೇಖಕರ ಕೃತಿಗಳೂ ದೀರ್ಘ ಕಾಲ ಬದುಕಿ ಉಳಿಯಲಾರವು ಎಂಬುದು ಸಾಹಿತ್ಯ ಚರಿತ್ರೆ ತಿಳಿದವರು ಬಲ್ಲ ಸಂಗತಿ. ನಮ್ಮ ನಾಡಿನ ಹೆಸರಾಂತ ವಿಮರ್ಶಕರೊಬ್ಬರ ತಮ್ಮ ಸಮಕಾಲೀನ ಪ್ರಮುಖ ಸಾಹಿತಿಗಳ ಬಗ್ಗೆ ಸ್ಪಂದಿಸಿದ್ದರ ಪ್ರಥಮ ದಾಖಲೆಯಾಗಿ ಈ ಕೃತಿ ನಿಲ್ಲಲಿದೆ.
- Book Format: Printbook
- Category: Critical Book
- Language: Kannada
- Publisher: Sahitya Prakashana
Reviews
There are no reviews yet.