ರಂಗಭೂಮಿಯ ಮುಖಾಂತರ
150.00 120.00 Add to basket
Sale!

ರಂಗಭೂಮಿಯ ಮುಖಾಂತರ

150.00 120.00

ರಂಗಭೂಮಿಯ ಮುಖಾಂತರ –

ಜಾಗತೀಕರಣಕ್ಕೆ
ಸಾಂಸ್ಕೃತಿಕ ಪ್ರತಿರೋಧಗಳು :
ಒಂದು ಪುನರ್ ಕಥನ

ಶಿವಮೊಗ್ಗದಲ್ಲಿ ೨೦೦೨ರ ಜೂನ್ ೮-೯ರಂದು ನಡೆದ ‘ಜಾಗತೀಕರಣ:ಸಮಗ್ರ ಮಂಥನ’ ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಿದ ಈ ಪ್ರಬಂಧವನ್ನು ನಾನು ಬರೆದುಕೊಂಡು ಹೋಗಿರಲಿಲ್ಲ; ಆದರೆ, ಏನು ಮಾತಾಡಬೇಕೆಂಬುದನ್ನು ಟಿಪ್ಪಣಿ ಮಾಡಿಕೊಂಡು ಹೋಗಿದ್ದೆ. ಅಲ್ಲಿ ನನ್ನ ಭಾಷಣ ನಡೆದದ್ದು ಸಮಾರೋಪಕ್ಕೆ ಮೊದಲು, ಕಟ್ಟಕಡೆಯದಾಗಿ. ಆದ್ದರಿಂದ, ಆ ಎರಡು ದಿನಗಳಲ್ಲಿ ನಾನು ಕೇಳಿದ್ದ ಇನ್ನಿತರ ಭಾಷಣ-ಚರ್ಚೆಗಳು ಮತ್ತು ಅಲ್ಲಿಗೆ ಬಂದಿದ್ದ ಅತಿಥಿಗಳೊಂದಿಗೆ ಆ ಸಮಯದಲ್ಲಿ ನಡೆಸಿದ ಮಾತುಕತೆಗಳು -……………………….

ಅಂದಿನ ಸಭೆಯಲ್ಲಿ ಈ ಭಾಷಣಕ್ಕೆ ತುಂಬ ತೀವ್ರರೂಪದ ಪ್ರತಿಕ್ರಿಯೆಗಳು ಬಂದಿದ್ದವು; ಅಲ್ಲಿದ್ದ ಹಲವು ಮಿತ್ರರು ಪ್ರಶ್ನೆಗಳ ಸರಣಿಯನ್ನೇ ನನ್ನೆದುರಿಗೆ ಇರಿಸಿದ್ದರು. ಆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ ಸಮಾಧಾನ ಕೊಡಬಲ್ಲೆನೆಂಬ ಧೈರ್ಯ ನನಗೆ ಅವತ್ತೂ ಇರಲಿಲ್ಲ; ಇವತ್ತೂ ಇಲ್ಲ. ಆದರೆ, ಆ ಪ್ರಶ್ನೆಗಳಿಗೆ ಹಿನ್ನೆಲೆಯಾಗಿ, ನಾನು ಅಂದು ಆಡಿದ ಮಾತನ್ನು ತುಸು ಸಾವಧಾನದಿಂದ ಕೇಳಿಸಿಕೊಳ್ಳುವ ವ್ಯವಧಾನ ಅಲ್ಲಿದ್ದ ನನ್ನ ಮಿತ್ರರಿಗೆ ಇರಲಿಲ್ಲವೆಂದು ನನಗನ್ನಿಸಿತ್ತು. ಮಾತ್ರವಲ್ಲ, ನನ್ನ ವಾದವನ್ನು, ತುಂಬ ತರಾತುರಿಯಲ್ಲಿ, ಸಾಧ್ಯವಾದಷ್ಟೂ ಬಲಪಂಥೀಯರ ದಿಕ್ಕಿಗೆ ಒತ್ತುವ ಪ್ರಯತ್ನವು ಅಲ್ಲಿ ನಡೆಯತೊಡಗಿದೆಯೆಂದು ಅನ್ನಿಸಿದ್ದರಿಂದ, ಒಂದು ಘಟ್ಟದ ಬಳಿಕ ಆ ಪ್ರಶ್ನೆಗಳನ್ನು ಉತ್ತರಿಸುವ ಆಸಕ್ತಿಯೂ ನನ್ನಲ್ಲಿ ಕಮರಿತು. ……………………………………………..

ಈಗ ಅಕಾಡೆಮಿಯವರು ಈ ಲೇಖನವನ್ನು ಬರೆಯಲೇಬೇಕೆಂದು ಒತ್ತಾಯಿಸುತ್ತಿರುವುದರಿಂದ, ಈ ಪುನರ್ ಕಥನದ ಮೂಲಕವಾದರೂ ಅಂಥ ಒಂದು ಸ್ಪಷ್ಟೀಕರಣವು ನನ್ನೊಳಗೆ ನಡೆದುಕೊಳ್ಳಲಿ ಎಂದು ಈಗ ಈ ಫ್ಲಾಷ್ ಬ್ಯಾಕಿಗೆ ತೊಡಗಿದ್ದೇನೆ.

  • Category: Essays
  • Author: Akshara K V
  • Publisher: Akshara Prakashana
  • Language: Kannada
  • Book Format: Ebook

Reviews

There are no reviews yet.

Only logged in customers who have purchased this product may leave a review.