ಇಡೀ ದೇಶದಲ್ಲಿ ಒಂದೇ ಮತವಿದ್ದರೆ ಗಲಾಟೆಗಳು ಇರುವುದಿಲ್ಲವೇನು? ಹಾಗಾದರೆ ಲೆಬನಾನ್ ದೇಶದಲ್ಲಿ ಹಜ್ ಬುಲ್ಲಾ ಷಿಯಾಗಲು ಸುನ್ನಿಗಳನ್ನು ಷಿಯಾಗಳನ್ನು ಏಕೆ ಸಾಯಿಸುತ್ತಿದ್ದಾರೆ? ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಷಿಯಾ-ಸುನ್ನಿಗಳ ನಡುವೆ ಏಕೆ ಅಷ್ಟು ರಕ್ತಪಾತ ಆಗುತ್ತಿದೆ?” ಎಂದು ಕೇಳಿ ಕೆಲಕ್ಷಣಗಳ ನಂತರ, “ಮನುಷ್ಯ ಸುಖವಾಗಿ ಬದುಕುವುದಕ್ಕೆ ಬೇಕಿರುವುದು ಮತವಲ್ಲವೋ, ಮಾನವೀಯತೆ”, ಎಂದನು.
“ಮಾನವೀಯತೆ ಅನ್ನ ಕೊಡುವುದಿಲ್ಲ.
“ಅಮೆರಿಕಾದಲ್ಲಿ ಅನ್ನವಿದೆ, ತಿನ್ನುವುದಕ್ಕೆ ಟೈಮ್ ಇಲ್ಲ. ಸೊಮಾಲಿಯಾದಲ್ಲಿ ಟೈಂ ಇದೆ, ತಿನ್ನುವುದಕ್ಕೆ ಅನ್ನ ಇಲ್ಲ. ಆಫ್ಗನ್ ನಲ್ಲಿ ಮತವಿದೆ, ಆದರೆ ಶಾಂತಿಯಿಲ್ಲ. ಎಲ್ಲಾ ಇರುವ ಭಾರತವನ್ನು ಏಕೆ ಹೀಗೆ ಹಾಳು ಮಾಡುತ್ತಿದ್ದೀರೋ?”
A SUSPENSE THRILLER
FROM THE MASTER STORY TELLER
ದಿಂಬಿನಡಿಯಲ್ಲೇ ವಿಷಸರ್ಪ!
ಕಾಡಿನಲ್ಲಿ ತಪ್ಪಿಸಿಕೊಂಡ ತಂದೆಯ ಹುಡುಕಾಟದಲ್ಲಿರುವ ಹುಡಿಗಿ!
ಭಯೋತ್ಪಾದನೆ ಕುರಿತಾದ ಪ್ರಶಸ್ತಿ ಪುರಸ್ಕೃತ ರೋಚಕ ಕಾದಂಬರಿ.
Reviews
There are no reviews yet.