Additional information
Category | Novel |
---|---|
Author | Girimane shyamarao |
Publisher | Girimane prakashana |
Language | Kannada |
₹130.00 ₹65.00
ಜೇನುಕಲ್ಲಿನ ರಹಸ್ಯ ಕಣಿವೆ
(ಮಲೆನಾಡಿನ ರೋಚಕ ಕತೆಗಳು-೪)
ಕಾದಂಬರಿ
ಗಿರಿಮನೆ ಶ್ಯಾಮರಾವ್
ಈ ಪಶ್ಚಿಮಘಟ್ಟ ಅದ್ಭುತ, ರಮ್ಯ, ಅಪರೂಪದ ಜೀವ-ಸಸ್ಯಗಳ ತಾಣ. ಆದರೆ ಅದು ಸುತ್ತಲಿಂದ ಇಂಚಿಂಚಾಗಿ ನಶಿಸುತ್ತಿದೆ. ಬಹುಶಃ ನಮ್ಮ ಕಾಲ ಮುಗಿಯುವುದರೊಳಗೆ ಅದರ ಸಹಜ ಸೌಂದರ್ಯ ಮಾಸಬಹುದು. ಮುಂದಿನ ಪೀಳಿಗೆಯವರಿಗೆ ಅದರ ಮತ್ತೊಂದು ರೂಪವೇ ಕಾಣಲು ಸಿಗಬಹುದು. ಹಾಗಾಗುವ ಮೊದಲೇ ಅದರ ಒಂದೊಂದೇ ಮಗ್ಗುಲನ್ನು ಪ್ರತಿಯೊಂದು ಕಾದಂಬರಿಯಲ್ಲೂ ಪದರು ಪದರಾಗಿ ಬಿಚ್ಚಿಡುತ್ತಾ ಹೋಗುವ ಉದ್ದೇಶ ಇಲ್ಲಿದೆ. ಕೋಟ್ಯಂತರ ವರ್ಷಗಳಿಂದ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ವನ್ಯಜೀವಿಗಳ ಬದುಕು ಒಮ್ಮೆಲೇ ಈ ಶತಮಾನದಲ್ಲಿ ಘೋರವಾಗಿ ಜೀವಜಾಲದ ಸರಪಳಿ ಕಡಿಯುತ್ತಿದೆ. ಅಲ್ಲಲ್ಲಿ ಮಾಡುವ ರಸ್ತೆ, ನಿರ್ಮಿಸುವ ಅಣೆಕಟ್ಟುಗಳು, ಕಟ್ಟುವ ಮನೆ ಇತ್ಯಾದಿಗಳಿಂದ ಅವು ತಮ್ಮ ನೆಲೆ ಎಲ್ಲಿ ಎಂದೇ ತಿಳಿಯದೆ ಊರೊಳಗೆ ಬರುತ್ತಿವೆ. ಜೊತೆಗೆ ಪಶ್ಚಿಮಘಟ್ಟದೊಳಗೆ ಮಾನವನ ಪ್ರವೇಶವಾಗಿ ಉದ್ದಕ್ಕೂ ಗಾಂಜಾ ಗಿಡಗಳು ಅನಧಿಕೃತವಾಗಿ ಬೆಳೆಯುತ್ತಿವೆ. ಅದನ್ನು ಬೆಳೆಯುವವರ ಕರಾಳ ಕೈ ಉದ್ದಕ್ಕೆ ಚಾಚಿದೆ. ಅದಕ್ಕೆ ಕುಮ್ಮಕ್ಕು ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹದಿಹರೆಯದ ಮಕ್ಕಳೂ ಅದರ ದಾಸರಾಗಿ ಬದುಕನ್ನೇ ನಾಶಮಾಡಿಕೊಳ್ಳುತ್ತಿದ್ದಾರೆ. ಅವರ ಭವಿಷ್ಯ ಮಂಕಾಗುತ್ತಿದೆ. ಮುಂದೆ ಏನಾಗಬಹುದು? ತಿಳಿಯದಾಗಿದೆ.
ಈ ಪಶ್ಚಿಮಘಟ್ಟದೊಳಗೆ ಹೇರಳವಾಗಿ ಸಿಗುತ್ತಿದ್ದ ಜೇನು, ಸವಿ ಎಂದಷ್ಟೇ ಬಹಳ ಜನಕ್ಕೆ ತಿಳಿದಿರುವುದು. ಶುದ್ಧ ಜೇನು ಎಲ್ಲಿ ದೊರೆಯುತ್ತದೆ? ಅದರಿಂದಾಗುವ ಪ್ರಯೋಜನಗಳೇನು? ಗೊತ್ತಿಲ್ಲ. ಹಾಗೆಯೇ ಜೇನುಹುಳಗಳು ಹೇಗೆ ಜೇನನ್ನು ಶೇಖರಣೆ ಮಾಡುತ್ತವೆ? ತಿಳಿದಿಲ್ಲ. ಪಶ್ಚಿಮಘಟ್ಟದ ಕಾಡುಗಳಲ್ಲಿ ತಾನಾಗಿ ಎಂಬಂತೆ ಸಿಗುತ್ತಿದ್ದ ಜೇನು ಈಗ ಅಲ್ಲೂ ಕಣ್ಮರೆಯಾಗುತ್ತಿರುವುದು ಯಾಕೆ?.
ಮಾಡಿದ ಕರ್ಮಗಳು ಬದುಕಿಗೆ ಮತ್ತೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದಾ? ಅದು ಬೇಗ ಕಣ್ಣಿಗೆ ಕಾಣದಿದ್ದರೂ ಬದುಕನ್ನು ಆಳವಾಗಿ ನೋಡಿದಾಗ ಅಲ್ಲ ಎನ್ನಲು ಬರುವುದಿಲ್ಲ. `ಮಾಡಿದ್ದನ್ನು ಅನುಭವಿಸಲೇಬೇಕು’ ಎನ್ನುವುದು ಜಗತ್ತಿನ ನಿಯಮವೇ ಆಗಿರಬೇಕು. ಇವೆಲ್ಲದರ ಒಳನೋಟ ಈ ಕಾದಂಬರಿಯಲ್ಲಿದೆ.
Category | Novel |
---|---|
Author | Girimane shyamarao |
Publisher | Girimane prakashana |
Language | Kannada |
Only logged in customers who have purchased this product may leave a review.
Reviews
There are no reviews yet.