ಹೇಗೆ ಬೇಕೋ ಹಾಗೆ
$0.95 $0.76 Add to basket
Sale!

ಹೇಗೆ ಬೇಕೋ ಹಾಗೆ

by Akshara K V

Sold by Akshara Prakashana

Ebook

$0.95 $0.76

ಹೇಗೆ ಬೇಕೋ ಹಾಗೆ –

‘ಹೇಗೆ ಬೇಕೋ ಹಾಗೆ’ ಅಂದರೆ ಮನಸೇಚ್ಛೆ ಎಂದಲ್ಲ; ನಮ್ಮಿಷ್ಟ ಬಂದಂತೆ ಎಂದೂ ಅಲ್ಲ; ಬದಲು, ನಮ್ಮ ಕಾಲದೇಶಗಳಿಗೆ ಹೇಗೆ ಸಮರ್ಪಕವಾಗಿ ಹೊಂದುತ್ತದೆಯೋ ಹಾಗೆ — ಎಂದು ಈ ಕನ್ನಡ ರೂಪ ಭಾವಿಸಿಕೊಳ್ಳುತ್ತದೆ.  ಉದಾಹರಣೆಗೆ, ಆಧುನಿಕ ಕನ್ನಡವು ಎರಡು ಅತಿಗಳ ನಡುವೆ ಬೇರೆಬೇರೆ ಬಗೆಗಳಲ್ಲಿ ಶೇಕ್‌ಸ್ಪಿಯರನನ್ನು ಕಂಡುಕೊಂಡಿದೆ.  ಒಂದು, ಸಾಹಿತ್ಯದ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟು ರೂಪಿಸಿದಂತೆ ಕಾಣುವ, ಪದಕ್ಕೆ ಪದವಿಟ್ಟು ಕಟ್ಟಿದ ಅನುವಾದಗಳು; ಹಲವೊಮ್ಮೆ ಇವು ಆಡಲಿಕ್ಕೆ ಹಾಗಿರಲಿ, ಓದಲಿಕ್ಕೂ ಕಠಿಣವೆನ್ನಿಸುವ ಕಗ್ಗಗಳು.  ಇನ್ನೊಂದು, ಅಲ್ಲಿಯ ಪಾತ್ರಗಳನ್ನೆಲ್ಲ ಇಲ್ಲಿಯ ಹೆಸರಿಗೆ ಬದಲಾಯಿಸಿ ಕಥಾಹಂದರವನ್ನು ಮಾತ್ರ ಉಳಿಸಿಕೊಂಡ ತೆಳು ರೂಪಾಂತರಗಳು; ಮೂಲದ ಕಾವ್ಯಗಾಢತೆಯೇ ಉಳಿಯದ ಇಂಥ ಆವೃತ್ತಿಗಳಿಂದ ಆಗುವ ಪ್ರಯೋಜನ ಅಷ್ಟಕ್ಕಷ್ಟೇ.  ಇವೆರಡಕ್ಕೂ ನಡುವೆ ಹಲವು ವಿಧದ ಮಧ್ಯಮಾರ್ಗಗಳಿವೆ.  ಆ ಹುಡುಕಾಟದಲ್ಲಿ ಹೊರಟು, ಈ ರಂಗರೂಪವು ಕೆಲವೊಮ್ಮೆ ಮೂಲವನ್ನು ಸಂಕ್ಷೇಪಿಸಿದೆ; ಅಲ್ಲಲ್ಲಿ ಮೂಲದ ಉಲ್ಲೇಖಗಳನ್ನು ಇಲ್ಲಿಗೆ ಸಲ್ಲುವಂತೆ ಬದಲಾಯಿಸಿದೆ.  ಕಡೆಯ ಅಂಕದಲ್ಲಿ ಮೂಲದ ನಾಲ್ಕು ದೃಶ್ಯಗಳನ್ನು ಮೂರಾಗಿ ಕೂಡಿಸಿ ಕಟ್ಟಲಾಗಿದೆ.

  • Category: Plays
  • Author: Akshara K V
  • Publisher: Akshara Prakashana
  • Language: Kannada
  • Book Format: Ebook

Reviews

There are no reviews yet.

Only logged in customers who have purchased this product may leave a review.