ಸಕ್ಕರೆಗೊಂಬೆ
$0.76 $0.61 Add to basket
Sale!

ಸಕ್ಕರೆಗೊಂಬೆ

by Vivek Shanbhag

Sold by Akshara Prakashana

Ebook

$0.76 $0.61

 ಸಕ್ಕರೆಗೊಂಬೆ  –

ಸಕ್ಕರೆಗೊಂಬೆ ನಾಟಕವನ್ನು ಗಮನಿಸಿದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕಥೆಗಳನ್ನು ಇದೊಂದೇ ಮೀರಿಸುವಂತಿದೆ. ಕಾರ್ಪೋರೇಟ್ ಜಗತ್ತು ತನ್ನ ತೆಕ್ಕೆಯೊಳಗಿನದೇ ಆಗಿಬಿಟ್ಟ ಮಧ್ಯಮವರ್ಗ ಮತ್ತು ಮೇಲ್ವರ್ಗದವರ ಬದುಕನ್ನು ಪ್ರಭಾವಿಸುವುದು ಮತ್ತು ನಿಯಂತ್ರಿಸುವುದು ಒಂದೆಡೆಯಿರುತ್ತ ಅದೇ ಕಾರ್ಪೊರೇಟ್ ಸಂಸ್ಕೃತಿಯ ತೀರಾ ಹೊರಗಿನ ವಲಯದಲ್ಲೇ ಒಂದು ಬದುಕನ್ನು ನಡೆಸುತ್ತಿರುವ ಕೆಲವು ವರ್ಗದವರ ದಿನನಿತ್ಯದ ಎಲ್ಲವನ್ನೂ ಹೇಗೆ ಮತ್ತು ಎಷ್ಟು ಪ್ರಭಾವಿಸಿದೆ ಎನ್ನುವುದರ ಸಂತುಲಿತ ಮನೋಭಾವದ ಗಮನಿಸುವಿಕೆ ನಾಟಕದಲ್ಲಿದೆ. ಸ್ಥೂಲವಾಗಿ ಕಂತು ಕಥೆ ಮಾರುಕಟ್ಟೆಯ ಸೆಳೆತ ಹಳ್ಳಿಯ ಬದುಕನ್ನು ಹೇಗೆ ತಲ್ಲಣಗೊಳಿಸಬಲ್ಲದು ಎಂಬುದನ್ನು ಹೇಳಿದರೆ, ಪ್ರತ್ಯಕ್ಷ ಕಥೆ ತೀರಾ ಅಂತರಂಗದ್ದಾಗಬಹುದಾದ ಗಂಡು ಹೆಣ್ಣು ಸಂಬಂಧ, ಕೊನೆಗೆ ಕಾಮವನ್ನು ಕೂಡ ಅದು ತನ್ನ ಪ್ರಭಾವಳಿಯ ಒಳಗೆ ಸೆಳೆದುಕೊಳ್ಳುವ ಆಘಾತಕಾರಿ ಚಿತ್ರ ನೀಡುತ್ತದೆ. ಹುಲಿ ಸವಾರಿ ಕಾರ್ಪೋರೇಟ್ ಜಗತ್ತಿನ ಆಂತರಿಕ ವರ್ಗವನ್ನು ಹೇಗೆ ಮಾರುಕಟ್ಟೆಯೇ ಆವರಿಸಿಕೊಂಡು ಅವರ ಚಿಂತನಾ ಶೈಲಿ, ಬದುಕಿನ ಆದ್ಯತೆಗಳನ್ನು ಬದಲಿಸಬಲ್ಲದು ಎಂಬುದರತ್ತ ಹೆಚ್ಚು ಗಮನ ನೀಡಿದೆ. ಆದರೆ ಸಕ್ಕರೆಗೊಂಬೆ ಎಲ್ಲ ಬಗೆಯ ಮನುಷ್ಯರನ್ನು ಕೇವಲ ಮನುಷ್ಯರನ್ನಾಗಿಯೇ ಗ್ರಹಿಸುತ್ತ ಅವರ ಮನುಷ್ಯತ್ವವನ್ನು ಕಾರ್ಪೋರೇಟ್ ಸಂಸ್ಕೃತಿ ಹಲವು ಪಾತಳಿಗಳಲ್ಲಿ ಹೇಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನೇ ಸೂಕ್ಷ್ಮವಾಗಿ ಸೂಚಿಸುವಂತಿದೆ.

  • Category: Plays
  • Author: Vivek Shanbhag
  • Publisher: Akshara Prakashana
  • Language: Kannada
  • Book Format: Ebook

Reviews

There are no reviews yet.

Only logged in customers who have purchased this product may leave a review.