ಯಯಾತಿ
$1.09 $0.65 Add to basket
Sale!

ಯಯಾತಿ

by Girish Karnad

Sold by Manohara Granthamala

Ebook

$1.09 $0.65

‘ಕವಿಯಾಗಬೇಕು’ ಎಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು ಬರೆದ ಮೊದಲ ನಾಟಕ. ರೋಡ್ಸ್ ಸ್ಕಾಲರ್ಶಿಪ್ ಮೇಲೆ ಇಂಗ್ಲೆಂಡಿಗೆ ತೆರಳುವ ಮುನ್ನ ತನ್ನ ’ಯಯಾತಿ’ಯ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರ ಬಳಿ ನೀಡಿದ್ದರು ಗಿರೀಶ್ ಕಾರ್ನಾಡ್ ಅವರು.

  • Category: Plays
  • Author: Girish Karnad
  • Publisher: Manohara Granthamala
  • Language: Kannada
  • ISBN: 81-88478-25-03
  • Book Format: Ebook

ಅದನ್ನು ಓದಿ ಮೆಚ್ಚಿದ ಜೋಶಿ ಅವರು ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರಿಗೆ ಓದಲು ನೀಡಿದ್ದರು. ಕೀರ್ತಿನಾಥ ಕುರ್ತಕೋಟಿ ಅವರ ಸಲಹೆ-ಸೂಚನೆಯ ಮೇರೆಗೆ ’ಯಯಾತಿ’ ಮೊದಲ ಬಾರಿಗೆ ೧೯೬೧ರಲ್ಲಿ ಪ್ರಕಟವಾಗಿತ್ತು.ನಾಲ್ಕು ಅಂಕಣಗಳಲ್ಲಿ ಇರುವ ’ಯಯಾತಿ’ ಮಹತ್ವದ ರಂಗಕೃತಿಗಳಲ್ಲಿ ಒಂದು. ಈ ನಾಟಕದಲ್ಲಿ ಬಳಕೆಯಾದ ಭಾಷೆ ಅದರ ಮಹತ್ವವನ್ನು ಹೆಚ್ಚಿಸಿದೆ.
ಯಯಾತಿ, ಪುರು, ದೇವಯಾನಿ, ಶರ್ಮಿಷ್ಠೆ ಹಾಗೂ ಚಿತ್ರಲೇಖೆ ಈ ನಾಟಕದ ಪ್ರಮುಖ ಪಾತ್ರಗಳು. ಯಯಾತಿ ಮಹಾರಾಜ ತನ್ನ ಈಡೇರಡದ ಕನಸುಗಳನ್ನು ಸಾಕಾರ ಮಾಡಲು ಮಗ ಪುರುವಿನ ಯೌವನ ಪಡೆಯುತ್ತಾನೆ. ತಂದೆಗೆ ತನ್ನ ಯೌವನ ನೀಡಿದ ಪುರುವಿಗೆ ಅಕಾಲ ವೃದ್ಧಾಪ್ಯ. ಪುರುವಿನ ನವಪತ್ನಿ ಚಿತ್ರಲೇಖೆ ಈ ನಾಟಕದ ವಿಶೇಷ-ಜೀವಂತಿಕೆ ಇರುವ ಪಾತ್ರ.
ತರ್ಕದ ಉರುಳಿನಲ್ಲಿ ಯಯಾತಿಯನ್ನು ಕಟ್ಟಿ ಹಾಕುವ ಚಿತ್ರಲೇಖೆಯ ಸ್ವಂತಿಕೆ ಮೆಚ್ಚುಗೆಗೆ ಪಾತ್ರವಾಗದೇ ಇರದು. ಮೊದಲ ಕೃತಿಯಲ್ಲಿಯೇ ಸೊಗಸಾದ ರಂಗಶಿಲ್ಪದ ಆಕೃತಿ ಕಟ್ಟಿಕೊಟ್ಟಿರುವ ಗಿರೀಶ್ ಕಾರ್ನಾಡ್ ಅವರಿಗೆ ಈ ನಾಟಕ ರಚನೆಗೆ ಅಸ್ತಿತ್ವವಾದದ ಪ್ರೇರಣೆ ಆಗಿದೆ. ಪೌರಾಣಿಕ ಕತೆ- ಪಾತ್ರಗಳಿಗೆ ಆಧುನಿಕ-ಸಮಕಾಲೀನತೆಯ ಸ್ಪರ್ಶ ನೀಡಿರುವುದು ಹಾಗೂ ವಿಭಿನ್ನ ಓದಿಗೆ ಅನುವು ಮಾಡಿಕೊಡುವುದು ಈ ನಾಟಕದ ವಿಶೇಷ.

Reviews

There are no reviews yet.

Only logged in customers who have purchased this product may leave a review.