ಜೀವನಧರ್ಮ ಯೋಗ
760.00 684.00 Add to basket
Sale!

ಜೀವನಧರ್ಮ ಯೋಗ

760.00 684.00

ಭಗವದ್ಗಿತೆಯು ಮೋಕ್ಷಶಾಸ್ತ್ರ ಮಾತ್ರವಲ್ಲ. ಜೀವನಶಾಸ್ತ್ರವೂ ಹೌದು. ಮೋಕ್ಷವನ್ನು ಉದ್ದೇಶದಲ್ಲಿರಿಸಿಕೊಳ್ಳದ ಸಾಮಾನ್ಯ ಜನರಿಗೂ ಗೀತೆಯಿಂದ ಪ್ರಯೋಜನವುಂಟು. ಲೋಕಜೀವನದ ವಿಷಯದಲ್ಲಿ ಗೌರವಬುದ್ಧಿಯನ್ನೂ ಕರ್ತವ್ಯಾಚರಣೆಯಲ್ಲಿ ಉತ್ಸಾಹವನ್ನೂ ಆಪತ್ಕಾಲದಲ್ಲಿ ಧೈೆರ್ಯವನ್ನೂ, ಸಂಶಯಗ್ರಸ್ತರಾದಾಗ ಮನಸ್ಸಿಗೆ ನೆಮ್ಮದಿಯನ್ನೂ ಉಂಟುಮಾಡಮಾಡಬಲ್ಲದ್ದು ಗೀತೆ. ಹೀಗೆ ಜನಸಾಮಾನ್ಯದ ಅವಶ್ಯಕತೆ ದೃಷ್ಟಿಯಿಂದ ಗೀತೆಯನ್ನು ನೋಡುವದು ಪ್ರಕೃತ ಗ್ರಂಥದ ಉದ್ಧೇಶ.

  • Book Format: Paperback
  • Author: DVG
  • Category: spiritual
  • Language: Kannada
  • Publisher: Sahitya Prakashana

ಸತ್ಯ ಒಂದು, ಸತ್ಯದರ್ಶನಗಳು ಸಾವಿರ. ದ್ವೈತಾದ್ವೈತಾದಿ ನಾನಾಮತಗಳ ನಡುವೆ ಸಾಮರಸ್ಯವು ಸಾಧ್ಯವೆಂಬುದು ಇಲ್ಲಿ ಇರಿಸಿಕೊಂಡಿರುವ ನಂಬಿಕೆ. ವಿವಾದಾಸ್ಪದಗಳಾದ ಅಂಶಗಳನ್ನು ಪಕ್ಕಕ್ಕಿರಿಸಿ, ನಮ್ಮ ಮಾತಾಚಾರ್ಯರುಗಳ ಉಪದೇಶಗಳಲ್ಲಿ ಯಾವುದೂ ಯಾರಿಗೂ ವಿರೋಧವಾಗದಂತೆಯೂ ಸರ್ವಸಮ್ಮತವಾದ ಉಪದೇಶಾಂಶಗಳಿಗೆ ಹೆಚ್ಚು ಗಮನ ಸೆಳೆಯುವಂತೆಯೂ ಅರ್ಥಾವಲೋಕನ ಮಾಡುವುದು ಇಲ್ಲಿಯ ಪ್ರಯತ್ನ.

ಧರ್ಮಾಭ್ಯಾಸಕ್ಕೆ ಮನುಷ್ಯಜೀವನದಲ್ಲಿ ಸ್ಥಾನವಿರುವಂತೆಯೇ ಭೋಗ ಭಾಗ್ಯಗಳಿಗೂ ಅವವುಗಳಿಗೆ ತಕ್ಕ ಸ್ಥಾನಗಳುಂಟು. ಈ ಸ್ಥಾನನಿಷ್ಕರ್ಷೆಗೆ ಬೇಕಾದ ವಿವೇಕವನ್ನು ಜಗಜ್ಜೀವನದ ಆಧಾರತತ್ತ್ವಗಳ ನಿರೂಪಣೆಯ ಮೂಲಕ ಭಗವದ್ಗೀತೆ ನಮಗೊದಗಿಸಿದೆ. ಭಗವತ್ ಸ್ಮರಣೆಯೊಡಗೂಡಿ ನಡೆದ ಜಗದ್ವ್ಯಾವಹಾರಗಳು ಜೀವಬಾಧಕಗಳಾಗದೆ ಜೀವತಾರಕಗಳೂ ಜಗತ್ಕಲ್ಯಾಣಗಳೂ ಆಗುತ್ತವೆ.

ಸಮ್ಯಗ್ಜೀವನವೇ ಭಾಗವದಾರಾಧನೆಯೆಂಬುದು ಇಲ್ಲಿಯ ತತ್ತ್ವ, ಲೋಕಜೀವನದ ಸಮ್ಯಗ್ಜಿಧಾನವೇ ಧರ್ಮ; ಧರ್ಮದ ಪರಿಪೂರ್ಣಫಲವೇ ಮೋಕ್ಷ. ಹೀಗೆ ಯಾವುದು ಪೂರ್ವಿಕರಿಗೆ ಮೋಕ್ಷಶಾಸ್ತ್ರವಾಯಿತೋ ಅದು ಇಂದಿನವರಿಗೆ ಜೀವನ ಧರ್ಮಶಾಸ್ತ್ರವೂ ಆಗಿದೆ.

Reviews

There are no reviews yet.

Only logged in customers who have purchased this product may leave a review.