ಪುರಾಣ ಪುಟಗಳಿಂದ….
$1.84 $1.10 Add to basket
Sale!

ಪುರಾಣ ಪುಟಗಳಿಂದ….

$1.84 $1.10

ಪುರಾಣಗಳ ಸ್ಥೂಲ ಪರಿಚಯ ಈ ಪುಸ್ತಕದ ಉದ್ದೇಶವಾದರೂ ಇದರಲ್ಲಿ ಅನುಕ್ರಮಣಿಕೆಯ ಪದ್ಧತಿಯಲ್ಲಿ ಪರಿಚಯವನ್ನು ಹೇಳುತ್ತ ಹೋಗಿಲ್ಲ. ನಮ್ಮ ಸಂಸ್ಕೃತಿಯ ಒಂದೊಂದು ತಾತ್ವಿಕ ಆಯಾಮವನ್ನು ಕೇಂದ್ರೀಕರಿಸಿಕೊಂಡು ಅಧ್ಯಾಯಗಳನ್ನು ಬರೆಯಲಾಗಿದೆ. ಹಾಗಾಗಿ ಮೇಲ್ನೋಟಕ್ಕೆ ಒಂದೊಂದು ಅಧ್ಯಾಯವೂ ಒಂದೊಂದು ದ್ವೀಪದಂತೆ ನಮಗೆ ಭಾಸವಾಗುತ್ತದೆ. ಇದೊಂದು ದೋಷವೆಂದು ಪರಿಗಣಿಸುವುದಿಲ್ಲ. ಇದು ಈ ಗ್ರಂಥದ ವೈಶಿಷ್ಟ್ಯವಾಗಿದೆ.

  • Author: T.M. Jagadeesh
  • Publisher: Mangala Prakashana
  • Book Format: Ebook
  • Pages: 150
  • Category: spiritual
  • Year Published: 2019
  • Language: Kannada

ಪ್ರಸ್ತುತ ಪುಸ್ತಕ ‘ಪುರಾಣ ಪುಟಗಳಿಂದ’ ಒಂದು ವಿಶಿಷ್ಟ ಗ್ರಂಥ. ಇದನ್ನು ಇಂಥದೇ ವರ್ಗಕ್ಕೆ ಸೇರಿಸಬೇಕು ಎನ್ನುವುದು ಸ್ವಲ್ಪ ಕಠಿಣವೇ. ಈ ಪುಸ್ತಕದ ವಿಷಯವಸ್ತು ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿ ಸ್ವಲ್ಪ ಸಂಕೀರ್ಣವಾದುದು. ಆಧುನಿಕ ದೃಷ್ಟಿಕೋನವು ಪುರಾಣಗಳ ಐತಿಹಾಸಿಕ ಮೌಲ್ಯವನ್ನು ಒಪ್ಪುವುದಿಲ್ಲ. ಇತಿಹಾಸಕ್ಕೂ, ಪುರಾಣಗಳಿಗೂ ಸಂಬಂಧವಿಲ್ಲ; ಹೆಚ್ಚೆಂದರೆ ಪುರಾಣಗಳಿಗಿರುವುದು ಆಧ್ಯಾತ್ಮಕ ಮೌಲ್ಯಗಳಷ್ಟೆ; ಅದು ದೇವರ ಮತ್ತು ದೇವರ ಪವಾಡಗಳ ಮಹತ್ವವನ್ನು ಬಣ್ಣಿಸುವ ಸಾಹಿತ್ಯ ಎಂಬುದು ಆಧುನಿಕ ವೈಚಾರಿಕತೆಯ ನಿಲುವು. ನಮ್ಮ ಪಠ್ಯ ಪುಸ್ತಕಗಳೂ ಸಹ ಇದೇ ನಿಲುವನ್ನು ಹೊಂದಿರುವುದರಿಂದ ಇಂದಿನ ಪೀಳಿಗೆಗೆ ಪುರಾಣಗಳ ಪರಿಚಯವೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಹಾಗೆ ನೋಡಿದರೆ ಯುಗಯುಗಗಳಿಂದ ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲಿ ಮತ್ತು ಅದನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬರುವಲ್ಲಿ ಪುರಾಣಗಳದ್ದು ಬಹುದೊಡ್ಡ ಪಾತ್ರ. ವೇದಗಳನ್ನು ಕ್ರಮಬದ್ಧವಾಗಿ ವಿಂಗಡಿಸಿದ ವೇದವ್ಯಾಸ ಮಹರ್ಷಿಗಳು ಜನಸಾಮಾನ್ಯರಿಗೆ ವೇದಗಳ ಸಾರವನ್ನು ತಿಳಿಸಲು ಮತ್ತು ನಮ್ಮ ಸಂಸ್ಕೃತಿಯ ಅರಿವನ್ನು ಹೆಚ್ಚಿಸಲು ಹದಿನೆಂಟು ಪುರಾಣಗಳನ್ನು ಬರೆದರು.

Reviews

There are no reviews yet.

Only logged in customers who have purchased this product may leave a review.