Only logged in customers who have purchased this product may leave a review.

ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು
$2.72 $2.45
ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು:
ಭಾಗವತವು, ಅದರಲ್ಲೂ ಈ ‘ಕೃಷ್ಣನ ಕೊನೆಯ ದಿನಗಳು’ ಇಪ್ಪತ್ತು ಅಧ್ಯಾಯಗಳು ಉಚ್ಚಶ್ರೇಷ್ಠ ತತ್ತ್ವಜ್ಞಾನ ಗ್ರಂಥವಾಗಿರುವಂತೆ, ನವರಸಭರಿತವಾದ ಪ್ರತಿ ಅಧ್ಯಾಯ ರಸೋತ್ಕರವಾದ ಗದ್ಯ ಕಾವ್ಯವಾಗಿದೆ. ವ್ಯಾಸರ ಕಣ್ಣಾಗಿ ನಾರಾಯಣಾಚಾರ್ಯರು ಮಹಾಭಾರತದ ಕೆನೆಯನ್ನು ಈ ಗದ್ಯ ಕಾವ್ಯಕ್ಕೆ ಸುವರ್ಣರಸದಂತೆ ಲೇಪಿಸಿದ್ದಾರೆ. ಈ ಇಪ್ಪತ್ತು ಅಧ್ಯಾಯಗಳ ಹೃದಯಸ್ಪರ್ಶಿ ಗದ್ಯಗಾಥೆಯ ದರ್ಶನದ ಸಾರದಲ್ಲಿ ವ್ಯಕ್ತಿ-ವ್ಯಕ್ತಿಯ ಜೀವನದಲ್ಲಿ ನಡೆಯುವ ದೇವಾಸುರ ಸಂಗ್ರಾಮದ ಇಷ್ಟಾನಿಷ್ಟಗಳ ಗುಟ್ಟು ಅಡಗಿದೆ.
ಪೂಜ್ಯ ಆಚಾರ್ಯರ ಸಂಸ್ಕೃತ, ಕನ್ನಡ, ಇಂಗ್ಲಿಷ್, ತಮಿಳು ಚತುರ್ ಭಾಷಾ ಪ್ರೌಢಿಮೆ, ಕಲ್ಪನಾ ಪ್ರಾಗಲ್ಭ್ಯ, ಜೀವಂತ ಪಾತ್ರ ನಿರೂಪಣೆ, ಮುಖ್ಯವಾಗಿ ಅವರ ವೇದ ತತ್ತ್ವಜ್ಞಾನ ಪಾಂಡಿತ್ಯ, ರಾಮಾಯಣ, ಮಹಾಭಾರತ, ಭಾಗವತಗಳ ಮೇಲಿನ ಪ್ರಭುತ್ವ, ಗೌರಿಶಂಕರ ಶಿಖರದಷ್ಟು ಎತ್ತರದ ತತ್ತ್ವಜ್ಞಾನ ನಮ್ಮಂತಹ ನೆಲದ ಮೇಲೆ ಓಡಾಡುವ ಮಣ್ಣಿನ ಮನಿಶ್ಯಾರಿಗೆ ಉಣ್ಣಿಸುವ ಔದಾರ್ಯಮಯ ಜ್ಞಾನಸಂಪತ್ತು ಇವುಗಳಿಗೆ ಆಗರವಾಗಿರುವ ಈ ಲೇಖಾಂಕ ಮಾಲೆಯ ಒಂದಿಷ್ಟು ಸವಿಯನ್ನು ಮೂಗಿಗೆ ಭಾರವೆನಿಸುವ ಈ ಮುನ್ನುಡಿ ನೀಡಿರಲಾರದು.
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.