ಶ್ರೀಭಾಷ್ಯಾದಿ ಗ್ರಂಥಗಳ ಸೊಬಗು, ವೈಶಿಷ್ಟ್ಯ ಇವು. Metaphysics, Aestheties, Ethics-Truth, Beauty, Goodnessಗಳ ಸಮರಸ, ಅನ್ಯೋನ್ಯ, ಪೂರಕ- Complimentary ಅಂಶಗಳು ರಾಮಾನುಜರ ತತ್ತ್ವದ ಸ್ವಾರಸ್ಯ. ಇತರ ದರ್ಶನಗಳಲ್ಲಿ ಈ ಬಗೆಯ ಸಾಮರಸ್ಯ, ಸಾಮಂಜಸ್ಯ, ಅನ್ಯೋನ್ಯಾಶ್ರಯಗಳನ್ನು ನಿರೂಪಿಸಲು ಶ್ರಮಪಡಬೇಕಾದುದನ್ನು ತತ್ತ್ವಾಭ್ಯಾಸಿಗಳು ಬಲ್ಲರು. ಇಲ್ಲಿ ಆ ಕಸರತ್ತು ಬೇಕಿಲ್ಲ. ಇಂಥ ಆಚಾರ್ಯರ ಜೀವನವೇ ಒಂದು ಪವಾಡ ಎನ್ನಬೇಕು.
ಇಂಥ ಮಹಾಗುರುಗಳ ಉಪದೇಶ ಇಂದಿಗೂ ಆಚರಣೆಗೆ ಅವಶ್ಯವಾದುದೆಂದು ಎಲ್ಲ ವಿರ್ಮತ್ಸರರೂ ಒಪ್ಪಬೇಕಾದದ್ದು ಅನಿವಾರ್ಯ. ವೇದಾಂತ ಒಂದೇ. ಅರ್ಥೈಕೆಯ ದಾರಿಗಳು ಭಿನ್ನ ಇರಬಹುದು, ಅಲ್ಲೂ ಹೊಂದಾಣಿಕೆಯ ದಾರಿ ಹುಡುಕುವವರಿಗೆ ಮೂಲಗ್ರಂಥಗಳ ನಿಜಸ್ವರೂಪ ತಿಳಿಯುವುದು ಸುಲಭ. ಗೃಹೀತಗ್ರಹಿಕೆಗಳಿಂದ ಲಾಭವಿಲ್ಲ.
Reviews
There are no reviews yet.