ವ್ಯಾಸರು ಎಲ್ಲಿ ಏನೇನನ್ನು ನನ್ನಂಥವರ ಕಲ್ಪನೆಗೆ, ವಿನ್ಯಾಸಕ್ಕೆ ಬಿಟ್ಟಿದ್ದಾರೆಯೋ, ಅಲ್ಲಿ ನಾನು ಕಲ್ಪನೆಯ ಕೊಂಡಿಗಳನ್ನು ಜೋಡಿಸಿದ್ದೇನೆ. ಮೂಲವನ್ನು ಓಡದವರಿಗೆ ಇವು ಗೋಚರಿಸುವುದಿಲ್ಲ. ನಾನು ಭಾಷಾಂತರಕಾರನೋ, ವಿಕೃತ ಮನಸ್ಸಿನ ಅತಿರೇಕಿಯೋ, ಭಾರತೀಯ ಸಂಸ್ಕೃತಿಯಲ್ಲಿ ಪೂರ್ವಾಗ್ರಹವುಳ್ಳವನೋ ಅಲ್ಲ. ಪ್ರಾಮಾಣಿಕವಾಗಿ ವ್ಯಾಸ ಹೃದಯಕ್ಕೆ ಕನ್ನಡಿ ಹಿಡಿಯುವ ಯತ್ನ ಎಲ್ಲಿದೆ.
“ಸಾಹಿತಿ” ಎಂಬ ಶಬ್ಬಕ್ಕೆ ಇಂದು ಸೇರಿರುವ ವ್ಯಾಖ್ಯೆ, ವ್ಯಾಪ್ತಿ, ಕಲ್ಪನೆಗಳನ್ನು ನೋಡಿದರೆ ನನ್ನನ್ನು ಈ ಸಾಹಿತಿಗಳ ವರ್ಗಕ್ಕೆ ಸೇರಿಸದಿರುವುದೇ ಕ್ಷೇಮ ಎಂದು ವಿನಂತಿ! If you read carefully, you will see overtones, undertones of comments or interpretations on our modern situations. ಅದು ವ್ಯಾಸಭಾರತದ ಹಿರಿಮೆ. ಅಲ್ಲಿ ಸಾರ್ವಕಾಲಿಕ ಕಣ್ಣು ಇದೆ. ಆ ಕಣ್ಣಿನಲ್ಲಿ ಇಂದಿನ ಶಕುನಿ ಕರ್ಣ ದುರ್ಯೋಧನ ಭೀಷ್ಮಾದಿಗಳನ್ನು ನೀವು ಗುರುತಿಸಲು ಇಲ್ಲಿ ಪ್ರಚೋದನೆ, ಪ್ರೋತ್ಸಾಹ Orientation of mind – ದೊರೆತರೆ ನಾನು ಬರೆದುದು ಸಾರ್ಥಕ. ಬರೀ ಬೋಳು ಕಥೆ ಅಲ್ಲ ಮೂಲ ಮಹಾಭಾರತ. ಅದು ನಿತ್ಯಗ್ರಂಥ, ಸತ್ಯಗ್ರಂಥ, ದರ್ಶನಗ್ರಂಥ, ಧರ್ಮಗ್ರಂಥ. ಈ ಎಲ್ಲ ಆಯಾಮಗಳಿಗೂ ಅಪಚಾರ ಆಗದಂತೆ, ನನಗೆ ಸಾಧ್ಯವಾದಷ್ಟು ಮೂಲ ರಹಸ್ಯಗಳನ್ನು ಇಲ್ಲಿ ಬಿಚ್ಚಿ ಇಟ್ಟಿದ್ದನ್ನು ನೀವು ಮನಗಂಡನೆ ಅದೇ ನನಗೆ ತೃಪ್ತಿ ಎಂದು ನಿವೇದಿಸುತ್ತೇನೆ.
-ಕೆ. ಎಸ್. ನಾರಾಯಣಾಚಾರ್ಯ
Reviews
There are no reviews yet.