Beteya Urulu
₹150.00 ₹75.00
ಬೇಟೆಯ ಉರುಳು
ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.
Reviews
There are no reviews yet.