ಎಷ್ಟು ಕಾಡತಾವ ಕಬ್ಬಕ್ಕೀ… :
ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಮತ್ತು ‘ಎಷ್ಟು ಕಾಡತಾವ ಕಬ್ಬಕ್ಕೀ…’ ಓದುವಾಗ ನಾವು ಬದುಕಿನೊಂದಿಗೇ, ಅದರ ನಿಷ್ಠುರ ಅನಿಯತಿಯೊಂದಿಗೇ ಹೊಕ್ಕಾಡುವ ಅನುಭವವಾಗುತ್ತದೆ. ಕಥೆಯನ್ನೂ ಅದೊಂದು ಬದುಕು ಎನ್ನುವಂತೆ ಬೆಳೆದುಕೊಳ್ಳುವುದು ಅಸಾಮಾನ್ಯ ಕತೆಗಾರನಿಗೆ ಮಾತ್ರ ಸಾಧ್ಯ. ಕಥೆಗಾಗಿ ಬದುಕು ಇರುವುದಿಲ್ಲ. ಲೇಖಕ ಎಂಬ ಹುಲುಮಾನವನು, ತಾನು ಕಂಡುಂಡು ಕಳವಳಿಸಿದ ಬದುಕನ್ನು ಅದರ ಎಲ್ಲ ವೈರುಧ್ಯ, ತೀವ್ರತೆ, ಅತಾರ್ಕಿಕತೆಯೊಂದಿಗೆ ಭಾಷೆಯ ಪಾದಯಾತ್ರೆಯಲ್ಲಿ ಹಿಡಿಯಲು ಸಾಧ್ಯವೇ ಎಂದು, ಪಾಟೀಲರ ಕಥೆಗಳು ಪರಮ ವಿನಯದಲ್ಲಿ ಪ್ರಯತ್ನ ಮಾಡುತ್ತವೆ. ಪಾಟೀಲರ ಹೊಸ ಸಂಗ್ರಹದಲ್ಲಿ ನಾವು ನೋಡುತ್ತಿರುವುದು ಅಂಥ ಕಥೆಗಳನ್ನು. ಬದುಕಿನ ನಿಬಿಡತೆಯನ್ನು ಯಾವ ಸಂವಿಧಾನದಲ್ಲಿ ಮಂಡಿಸಿದಾಗ ದರ್ಶನದ ಹೊಳಹೊಂದು ಫಳಕ್ಕನೆ ಮಿಂಚುವುದು ಎಂಬ ಸಂಗತಿಯು ಹಗಲೆಚ್ಚರಕ್ಕೆ ಏನು ಗೊತ್ತು? ಚಾರಣವೇ ತುದಿಗುರಿಯೆಂಬಂತೆ ಪಾಟೀಲ ತಮ್ಮ ಕಥೆಗಳನ್ನು ಬರೆಯುತ್ತಾರೆ. ಅದೇ ಅವರ ಅನನ್ಯತೆ.
Reviews
There are no reviews yet.