ಇಂದಿನ ಕೋಮುದ್ವೇಷ, ಕೋಮು ಸಾಮರಸ್ಯಗಳ ಸಾಮಾಜಿಕ ಪರಿಸರವನ್ನು ಆಧರಿಸಿ ರೂಪುಗೊಂಡ ಕತೆ ‘ಸುಂದರ ನಾಳೆ’. ‘ಜಾತಿ ವೈಷಮ್ಯ ತೊಲಗಬೇಕೆಂಬ ಕಳಕಳಿ ಇಲ್ಲಿ ಪ್ರತಿಬಿಂಬಿತವಾಗಿದೆ. ‘ಕೀಳರಿಮೆ’ ಮನುಷ್ಯ ಸಹಜವಾದ ಮಾತ್ಸರ್ಯದಿಂದ ಗೆಳತಿಯ ರಿಬ್ಬರಲ್ಲಿ ಉಂಟಾಗುವ ವಿರಸದ ಪ್ರಸಂಗಕ್ಕೆ ಸಂಬಂಧಿಸಿದ ಕತೆ.
ಕುಡುಕ ಗಂಡನಿಂದ ದೂರವಿದ್ದು ತನ್ನ ಪುಟ್ಟ ಮಗಳೊಡನೆ ಸ್ವತಂತ್ರವಾಗಿ ಬದುಕು ಸಾಗಿಸುತ್ತಿದ್ದ ‘ಕುಸುಮ’ಗಳಿಗೆ ಉಂಟಾಗುವ ಸಮಸ್ಯೆಯೊಂದಕ್ಕೆ ಅವಳು ಪರಿಹಾರ ಕಂಡುಕೊಳ್ಳುವುದಲ್ಲದೇ ಪುನಃ ಪತಿಯನ್ನು ಪಡೆಯುವ ವಿಶಿಷ್ಟ ಕತೆ ‘ಪುನರ್ಮಿಲನ.’ ಅತ್ತೆ – ಸೊಸೆ ನಡುವಿನ ಬಾಂಧವ್ಯದಲ್ಲಿ ಬರುವ ಸಣ್ಣ ಬಿರುಕಿನ ಸರಳ ಕತೆ ‘ಸಂಬಂಧಗಳು.’
‘ಆಕೆ’ ಈ ಸಂಕಲನದ ಒಂದು ಉತ್ತಮಕತೆ. ಅಸಹಾಯಕ ಮಹಿಳೆಯೊಬ್ಬಳು ಪರಿಸ್ಥಿತಿಯ ಇಕ್ಕಟ್ಟಿನಲ್ಲಿ ಸಿಲುಕಿ ಅವಳಲ್ಲಿ ಒಂದು ಬಗೆಯ ಕ್ರೌರ್ಯ ಮನೋಭಾವ ಹುಟ್ಟಿಕೊಳ್ಳುತ್ತದೆ. ಅಂಥವರನ್ನು ತಿರಸ್ಕಾರದಿಂದ ನೋಡದೆ ಅವರಿಗೆ ಸಾಂತ್ವನ, ಸಹಾನುಭೂತಿ, ಸಹಾಯ ಒದಗಿಸಿದರೆ ಅವರೂ ಬದಲಾಗಬಹುದು. ಇಂಥ ಒಂದು ಮಾನವೀಯ ಅಂತಃಕರಣ ಎಳೆ ಈ ಕತೆಯನ್ನು ನಮಗೆ ಪ್ರಿಯವಾಗಿಸುತ್ತದೆ.
ಜಾಗತಿಕ ರಿಸೆಶನ್ ಪರಿಣಾಮವಾಗಿ ಕೆಲಸ ಕಳೆದುಕೊಂಡರೂ ಧೈರ್ಯಗೆಡದೆ ಹಳ್ಳಿಗೆ ಹೋಗಿ ಕೃಷಿ ವ್ಯವಸಾಯಕ್ಕೆ ತೊಡಗಿ ಯಶಸ್ವಿಯಾಗುವ ಸಮೀರ ಹಾಗೂ ಗೀತಾ ಎಂಬ ಯುವಕ – ಯುವತಿಯರ ಆದರ್ಶವನ್ನು ನಮ್ಮೆದುರು ಇಡುವ ಕತೆ ‘ಮರಳಿ ಮಣ್ಣಿಗೆ.’
ಯಾವ ರಕ್ತ ಸಂಬಂಧವಿಲ್ಲದಿದ್ದರೂ ಕೆಲವೊಂದು ಸಂಬಂಧಗಳು ನಮ್ಮನ್ನು ಆವರಿಸಿಕೊಂಡು ಕಾಡುವುದಿದೆ. ಅದಕ್ಕೆ ಸ್ಪಷ್ಟ ಉತ್ತರ – ವಿವರಣೆ ನೀಡುವುದು ಕಷ್ಟವಾಗುತ್ತದೆ. ‘ಅವನಾರು’ ಎಂಬ ಕತೆ ಈ ದೃಷ್ಟಿಯಿಂದ ಗಮನ ಸೆಳೆಯುವಂತಹದು. ಎಲ್ಲೋ ಒಂದೆಡೆ ಮನಸ್ಸು ಕಲಕುವ ಶಕ್ತಿ ಈ ಕತೆಗಿದೆ.
ಕೊನೆಯ ಕತೆ ‘ಕೊನೆಯ ನಗೆ.’ ಒಂದು ಕುಟುಂಬದಲ್ಲಿ ಸಹಜವಾಗಿ ನಡೆದುಬಹುದಾದ ಸೊಸೆಯರ ನಡುವಿನ ಮಾತ್ಸರ್ಯ, ಮೇಲಾಟಗಳ ಚಿತ್ರಣ ಇಲ್ಲಿದೆ.
Sale!
ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು
$0.82 $0.49
ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.
- Category: Stories
- Author: Deepika Chate
- Publisher: VIVIDLIPI
- Language: Kannada
- Book Format: Ebook
- Year Published: 2010
Only logged in customers who have purchased this product may leave a review.
Reviews
There are no reviews yet.