ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ,ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ.ಅಜಿತ್ ಹೆಗಡೆಯವರು ತಮ್ಮ ಕಥೆಗಳನ್ನು ವೃತ್ತಿ ಹಾಗೂ ಭೂ ಪ್ರದೇಶದ ಪರಿಧಿಯಿಂದ ಹೊರಕ್ಕೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. `ವಿಮೋಚನೆ’ ಹಾಗೂ ‘ಗುಪ್ತಗಾಮಿನಿ’ ಎನ್ನುವ ಕತೆಗಳಲ್ಲಿ ತುಸು ವೈದ್ಯಲೋಕದ ಛಾಯೆ, `ಮಗ್ದಷ್ಟೇ ಬದುಕು’ವಿನಲ್ಲಿ ಮಲೆನಾಡಿನ ತುಣುಕು ಬಿಟ್ಟರೆ ಅವರ ಕತೆಗಳೆಲ್ಲಾ ಸಾರ್ವತ್ರಿಕವಾದುದು. ವೈದ್ಯನಲ್ಲೂ ಒಬ್ಬ ಸಹಜ ಮನುಷ್ಯನಿದ್ದಾನೆ; ಎಲ್ಲೂ ಇರಬಹುದಾದ ಆ ಮನುಷ್ಯ ಉತ್ತರ ಕನ್ನಡದ ಆಸುಪಾಸಿನಲ್ಲೂ ಇದ್ದಾನೆ ಎನ್ನುವ ನಿಲುವಿನೊಂದಿಗೆ ಅವರು ಬರೆಯುತ್ತಾರೆ ಅನ್ನಿಸುತ್ತದೆ. ಬದುಕಿನ ಸಂಕೀರ್ಣತೆ, ಮನುಷ್ಯ ಸಂಬಂಧ, ವಿಚಾರಗಳ ಸಂಘರ್ಷ, ಮನೋವ್ಯಾಪಾರಗಳನ್ನೇ ಅವರ ಕಥೆಗಳ ಮೂಲದ್ರವ್ಯವಾಗಿ ಅವರು ಬಳಸಿಕೊಂಡಿದ್ದಾರೆ.`ಕೇತಕಿ ‘ ಸಿದ್ಧಾಂತಗಳ ದ್ವಂದ್ವದ ಸುತ್ತ ಸುಳಿಯುವ ಕತೆ.`ತನ್ನದೆಂಬ ಒಂದು ಸಣ್ಣ ವಸ್ತುವನ್ನೂ ಕಳೆದುಕೊಳ್ಳಲಿಚ್ಛಿಸದ ಮನುಷ್ಯ ತನ್ನಂತಹದೇ ಇನ್ನೊಂದು ಜೀವಿಯ ನೆಲೆಯನ್ನೇ ಧ್ವಂಸ ಮಾಡುವುದು ಎಂಥ ನ್ಯಾಯ ?’ ಎನ್ನುವ ಪ್ರಶ್ನೆಯನ್ನು ಇನ್ನಷ್ಟು ಗಟ್ಟಿಯಾಗಿ ಕೇಳಿಕೊಳ್ಳುವಂತೆ ಮಾಡುವ ಕತೆ `ಗೂಡು’.
Sale!
ಕಾಮೋಲ
$1.36 $0.82
ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ,ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ.
- Author: Ajit Hegde
- Publisher: Mangala Prakashana
- Book Format: Ebook
- Language: Kannada
- Pages: 128
- Year Published: 2019
- Category: Short stories
Only logged in customers who have purchased this product may leave a review.
Reviews
There are no reviews yet.