Makkaligagi Deshavideshiya Janapada Kathegalu
₹100.00 ₹50.00
ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು
ಮಕ್ಕಳಿಗಾಗಿ ಕಥೆ ಬರೆಯುವುದು ಒಂದು ಕಲೆ, ಮಕ್ಕಳ ಮನಸ್ಸನ್ನು ಮುಟ್ಟುವ , ಅವರ ಕಲ್ಪನಾ ಶಕ್ತಿಯನ್ನು ತಟ್ಟುವ, ಸರಳ ಸುಂದರ ಭಾಷೆಯ ಕಥೆಗಳನ್ನು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ವಿಂಗಡಿಸಿ ಬರೆಯುವುದು ಇನ್ನೂ ಉತ್ತಮ, ಇನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ದೊಡ್ಡವರು ಇಂತಹ ಕತೆಗಳನ್ನು ಓದಿ ಹೇಳಿ , ಮುಂದೆ ಅವರಿಗೆ ಕಥೆಗಳನ್ನು ಓದುವ ಚಟ, ಆಸಕ್ತಿ ಬೆಳೆಸಬಹುದು.
ಈಗಿನ ಮಕ್ಕಳಿಗೆ ಪ್ರಪಂಚದ ಅಗುಹೋಗುಗಳನ್ನು ತಿಳಿಯಲು ನಾನಾ ವಿಧವಾದ ಅನುಕೂಲಗಳಿವೆ. ರೇಡಿಯೋ, ದೂರದರ್ಶನ, ಇಂಟರ್ ನೆಟ್ ಗಳ ಮೂಲಕ ಅವರ ತಿಳುವಳಿಕೆ ಬಹಳಷ್ಟು ಹೆಚ್ಚುತ್ತಿದೆ. ಅವರಲ್ಲಿ ಜ್ಞಾನದಾಹ ಹೆಚ್ಚುತ್ತಿದೆ. ಇಂಟರ್ ನೆಟ್ ನಲ್ಲಿ ಬೇರೆ ಬೇರೆ ವೆಬ್ ಸೈಟುಗಳಿಗೆ ಹೋಗಿ ಅವರು ಹೊಸ ವಿಷಯಗಳನ್ನು ಸಾಹಿತ್ಯಿಕ ವಿಚಾರಗಳನ್ನು ತಿಳಿಯಬಲ್ಲರು. ಏನೇ ಆದರು ಪುಸ್ತಕ ಪ್ರಿಯತೆ, ಪುಸ್ತಕಗಳನ್ನು ಓದಿ ಮನನ ಮಾಡುವುದು ಅದೊಂದು ಆತ್ಮೀಯ ಹವ್ಯಾಸವಾಗಬೇಕು. ಮಕ್ಕಳಿಗೆ ಈ ನಿಟ್ಟಿನಲ್ಲಿ ಹೊಸ ಹೊಸ ಪುಸ್ತಕಗಳನ್ನು ಹೊರತರಲು ಪ್ರಕಾಶಕರು ಕಾರ್ಯವನ್ನು ಮಾಡಬೇಕು. ಅಂತಹ ಧ್ಯೇಯವನ್ನು ಇಟ್ಟುಕೊಂಡಿರುವ ಓಂಶಕ್ತಿ ಪ್ರಕಾಶನದ ಶ್ರೀ ವಿ. ಹೇಮಂತುಕುಮಾರ್ ರವರು ಈ ಹೊತ್ತಿಗೆಯನ್ನು ಕೃತಿ ರೂಪಕ್ಕೆ ತಂದಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿರುವೆ.
Reviews
There are no reviews yet.