Only logged in customers who have purchased this product may leave a review.
Sale!
ಮ್ಯೂಟೇಶನ್
$0.95 $0.86
ಮ್ಯೂಟೇಶನ್
(ಕಥಾಸಂಕಲನ)
ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.
- Category: Stories
- Author: S F Yogappanavar
- Publisher: Manohara Granthamala
- Language: Kannada
- Book Format: Printbook
Reviews
There are no reviews yet.