Shree Bhaagavata Kathaa Prapancha
₹350.00 ₹175.00
ಶ್ರೀ ಭಾಗವತ ಕಥಾ ಪ್ರಪಂಚ
ಶ್ರೀ ಭಾಗವತಧಾರಾತೀರ್ಥ ವಾಹಿನಿ
ಈ “ಶ್ರೀ ಭಾಗವತ ಧಾರಾತೀರ್ಥವಾಹಿನೀ-ಶ್ರೀ ಭಾಗವತ ಕಥಾ ಪ್ರಪಂಚ” ಗ್ರಂಥದ ಪ್ರಕೃತ ಸಂಪುಟದ ಬಹುಭಾಗವನ್ನು ನಾನು ಬರೆದೇ ೧೬- ಅಥವಾ ೧೮ ವರ್ಷಗಳಾಗಿರಬೇಕು. ಮೊದಲ ಭಾಗಕ್ಕೆ ಸೇರ್ಪಡೆಯಾಗಬೇಕಿದ್ದ ಇನ್ನಷ್ಟನ್ನು ಇದೀಗ ಸೇರಿಸಿ ಒಂದು ರೂಪಕ್ಕೆ ತಂದು, ನನ್ನ ಮಿತ್ರ ಶ್ರೀ ಸುಬ್ರಹ್ಮಣ್ಯ ಅವರ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಕೈ ಸೇರುವಂತೆ ಮಾಡಲಾಗಿದೆ. “ಈ ಗ್ರಂಥ ಏಕೆ ಇಷ್ಟು ತಡವಾಯಿತು? ಇದರಲ್ಲೇನಿದೆ? ಇದರ ಅವಶ್ಯಕತೆಯೇನು?” ಎಂಬ ಬಗೆಗೆ ನಾಲ್ಕು ಮಾತು ವಿವರಣೆ ಅವಶ್ಯವಾಗುತ್ತದೆ.
“ಶ್ರೀಕೃಷ್ಣಾವತಾರ” (ಎರಡು ಭಾಗಗಳು) ಬರೆದಾಗಿತ್ತು. ಮೊದಲನೆಯದು ಭಾಗವತ ದಶಮಸ್ಕಂಧದ ಪೂರ್ವಾರ್ಧದ ಕಾದಂಬರೀಕರಣ, ಕಥಾರೂಪ ನಿವೇದನೆಯಾಗಿದ್ದು “ತರಂಗ” ವಾರಪತ್ರಿಕೆಯಲ್ಲಿ ಪ್ರಕಟವಾಗಲು ವಾರಾವಾರಾ ಕಂತಿನಲ್ಲಿ ಬರುವಂತೆ ಬರೆಯಲಾಗಿದ್ದು ಪ್ರಕಟವೂ ಆಯಿತು.
Additional information
Category | Stories |
---|---|
Author | Dr. K.S. Narayanacharya |
Publisher | Sahitya Prakashana |
Language | Kannada |
Only logged in customers who have purchased this product may leave a review.
Reviews
There are no reviews yet.