Only logged in customers who have purchased this product may leave a review.

ದೇವನೆಲದಲ್ಲಿ ರುದ್ರಭೂಮಿ
$2.38 $2.15
ದೇವನೆಲದಲ್ಲಿ ರುದ್ರಭೂಮಿ:
ಅಂತೂ ನಾಲ್ಕು ತಾಸು ನಡೆದು ಮುಖ್ಯ ರಸ್ತೆಗೆ ಬಂದಿದ್ದೆವು. ಅಲ್ಲಿಯೇ ಎದುರಾದದ್ದು ನಿರೀಕ್ಷಿತ ಸವಾಲು. ಮುಂದಕ್ಕೆ ಕಾಡಿನಲ್ಲಿ ಹದಿಯಿಲ್ಲ. ಕಣ್ಣೆದುರು ಇದ್ದ ಹಾದಿಯಲ್ಲಿ ಕುಸಿತ ಇನ್ನೂ ನಿಂತಿಲ್ಲ. ಅದನ್ನು ದಾಟಿ ಹೋಗುವುದಾದರೂ ಹೇಗೆ? ಅರ್ಜುನ್ ಸಿಂಗ್ ನ ಎಂಜಿನಿಯರಿಂಗ್ ತಲೆ ಓಡತೊಡಗಿತ್ತು. ಗೆಳೆಯರ ಜೊತೆ ಟ್ರಕ್ಕಿಂಗ್ ಹೋದ ಅನುಭವವಿತ್ತು ಆತನಿಗೆ. ಗುಡ್ಡವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಆತ, ಎರಡು ಕುಸಿತದ ನಡುವಿನ ೬ ನಿಮಿಷಗಳ ಅಂತರದಲ್ಲಿ ಒಬ್ಬೊಬ್ಬರೇ ಆಚೆ ದಡವನ್ನು ಓಡಿ ದಾಟಬೇಕು. ಮೊದಲನೆಯವನನ್ನು ದಾಟಿಸುವುದೇ ಸಾಹಸ. ಆತನಿಗೆ ಬೇರಿನ್ನೇನೂ ಆಧಾರವಿರುವುದಿಲ್ಲ. ಕುಸಿಯುವ ಮಣ್ಣಿನ ಮೇಲೆಯೇ ಕಾಲಿಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಲೇ ಸಾಗಬೇಕು. ಒಂದೊಮ್ಮೆ ೬ ನಿಮಿಷಕ್ಕೆ ಮೊದಲು ದಾಟದಿದ್ದರೆ ಯಾವದೇ ಕ್ಷಣದಲ್ಲಿ ಉರುಳಿಬರುವ ಬಂಡೆಗಳು ತಲೆ ಛಿದ್ರಗೊಳಿಸಬಹುದು. ಹಾಗೆಂದು ಅವನು ಮೇಲೆ ನೋಡುತ್ತಾ ಮುಂದೆ ಹೊರಟರೆ ಕಾಲ್ ಕೆಳಗೆ ಕುಸಿದು ಪ್ರಪಾತ ಸೇರುತ್ತಾನೆ. ಒಮ್ಮೆ ಒಬ್ಬ ಆಚೆಗೆ ದಾಟಿಬಿಟ್ಟರೆ ಈ ಕಡೆಯಿಂದ ಆ ಕಡೆಗೆ ದಾರ ಕಟ್ಟಿ ಎಲ್ಲರನ್ನೂ ದಾಟಿಸುವುದು ಸುಲಭ. ಒಬ್ಬ ದಾಟುವುದು ಹೇಗೆ? ಆ ಒಬ್ಬ ಯಾರು….?
- Book Format: Printbook
- Category: Travelogue
- Language: Kannada
- Publisher: Sahitya Prakashana
Reviews
There are no reviews yet.