ಈ ಪುಟ್ಟ ಹೊತ್ತಿಗೆಯನ್ನು ಸ್ನೇಹಿತರಾದ LIC ಅಭಿವೃದ್ಧಿ ಅಧಿಕಾರಿ, ಶ್ರೀ ಅನಂತ ಪದ್ಮನಾಭನವರು ತುಂಬಾ ಪ್ರೀತಿಯಿಂದ ಬರೆದಿದ್ದಾರೆ. ಶ್ರಮಸಾಧ್ಯವಾದ ಕೈಲಾಸ ಮಾನಸ ಸರೋವರದ ಯಾತ್ರೆಯನ್ನು ಸ್ನೇಹಿತರು ಮಾಡಿ ‘ಕೈಲಾಸ ವಾಪಸಿ’ಗಳಾಗಿದ್ದಾರೆ. ತಾವು ಕಂಡದ್ದನ್ನು, ಮಾಡಿದ್ದನ್ನು, ಮಾಡಬಹುದಾದದ್ದನ್ನು, ಮಾಡದೇ ಉಳಿದದ್ದನ್ನು ಇನ್ನು ಮುಂದೆ ಹೋಗಲಿಚ್ಛಿಸುವವರ ಪ್ರಯೋಜನಕ್ಕಾಗಿ ದಾಖಲಿಸಿದ್ದಾರೆ. ಇದು ತುಂಬಾ ಸುಂದರ ಪ್ರಯತ್ನ. ಸಾಮಾನ್ಯವಾಗಿ ಪ್ರವಾಸೀ ಮಾರ್ಗದರ್ಶಿಗಳಲ್ಲಿ ದೊರೆಯದ ವಿವರಣೆ ಇಲ್ಲಿದೆ.
-ಡಾ. ಗುರುರಾಜ ಕರಜಗಿ
ಶ್ರೀ ಅನಂತ ಪದ್ಮನಾಭ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಒಬ್ಬ ನಟ, ವಾಗ್ಮಿ, ಮೇಲಾಗಿ ಆಸ್ತಿಕ. ತಮ್ಮ ಪ್ರವಾಸ ಕಥನವನ್ನು “ಕೈಲಾಸ ಮಾನಸ ಯಾನ” ಎಂಬ ಶೀರ್ಷಿಕೆಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇದು ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆ ಮಾಡುವವರಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಮನುಷ್ಯ ನಿರ್ಮಿತ ಗುಡಿಗೆ ಹೋಗುವವರು ನಿಸರ್ಗ ನಿರ್ಮಿತ ಕೈಲಾಸ ಪರ್ವತಕ್ಕೆ ಹೋಗಬೇಕಾದರೆ, ಮನಸ್ಸು ಮತ್ತು ಮೈ ಎರಡನ್ನೂ ಗಮನದಲ್ಲಿಟ್ಟುಕೊಂಡು ದುರ್ಗಮ ದಾರಿಯಲ್ಲಿ ನಡೆಯುವಾಗ ‘ನಾ’ ಎನ್ನುವುದನ್ನು ಬಿಟ್ಟು, ‘ನೀ’ ಎಂದು ಎಲ್ಲವನ್ನೂ ಶಿವಾರ್ಪಣ ಮಾಡಿ, ನಿರ್ಭಯವಾಗಿ, ನಿರ್ಮಲ ಮನಸ್ಸಿನಿಂದ ಪರಿಕ್ರಮ ಮಾಡಿದರೆ, ಅಲೌಕಿಕ ಅನುಭವ ಆಗುತ್ತದೆ. ಶ್ರೀ ಅನಂತ ಪದ್ಮನಾಭ ಅವರ ಈ ಕೃತಿ ಓದುಗರಿಗೆ, ಪರಿಕ್ರಮ ಮಾಡಬೇಕೆಂಬ ಮನಸ್ಸಿದ್ದವರಿಗೆ ಪೂರ್ವ ಸಿದ್ಧತೆಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ.
-ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ
Reviews
There are no reviews yet.