ಕಾಳು ಕೂಳಿನ ಅಕ್ಷರ ಮಾಲೆ
ಕರಾವಳಿಯ ಗದ್ದೆಗಳಲ್ಲಿ ಬೇಸಿಗೆಯಲ್ಲಿ ಮರಳಿನ ಹೊಂಡಗಳು ನಿರ್ಮಾಣವಾಗುತ್ತವೆ, ಅದರಿಂದ ನೀರೆತ್ತಿ ಹಾಲಕ್ಕಿಗರು ತರಕಾರಿ ಬೆಳೆಯುತ್ತಾರೆ. ಕಷ್ಟ ಪಡುವುದು ಸಾಕೇ ಸಾಕು, ಮಣ್ಣಿನ ದುಡಿಮೆ ಬೇಡವೆಂದು ಇವರೆಲ್ಲ ಗದ್ದೆ ಬಿಟ್ಟು ಅಲ್ಲಿಯೇ ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತರೆ ಅರೆಕ್ಷಣದಲ್ಲಿ ಬೇರು ಕಿತ್ತು ಎಲ್ಲಿಗೋ ಹೊರಡಬಹುದು. ಮಹಾನಗರಗಳ ಮೂಲೆಯಲ್ಲೋ, ಕಾರ್ಖಾನೆಗಳ ಹೊಗೆ ಕೊಳವೆಗಳ ಸಂಧಿಯಲ್ಲೋ, ತಳ್ಳುಗಾಡಿಯವರ ವೇಷದಲ್ಲೋ ನೆಲೆ ಕಾಣಬಹುದು. ಪರಂಪರೆಯ ಪ್ರೀತಿ ಉಳಿಸಿಕೊಂಡು ಮಣ್ಣಿನ ಬದುಕು ಮುಖ್ಯವೆಂದು ನೆಲಕ್ಕೆ ಅಂಟಿಕೊಂಡಿದ್ದಾರೆ, ಊರಲ್ಲಿ ನಿಂತಿದ್ದಾರೆ. ಇವರೆಲ್ಲ ಯಾರೆಂದು ನಿತ್ಯ ಇವರೇ ಬೆಳೆದ ತರಕಾರಿ ತಿನ್ನುವವರಿಗೆ ಗೊತ್ತಿರಲಿಕ್ಕಿಲ್ಲ.
ಹಳ್ಳಿಯ ಕೃಷಿ ಹಿರಿಯರನ್ನು ನೋಡುತ್ತ ಹೊರಟರೆ ನಮ್ಮ ಅನ್ನದ ಅರಿವು ವಿಸ್ತಾರಗೊಳ್ಳುತ್ತದೆ. ನನಗಂತೂ ಹೊಲದ ಮೇಷ್ಟ್ರುಗಳ ದೊಡ್ಡ ಪಡೆಯೇ ಸಿಕ್ಕಿದೆ, ವನವಾಸಿ ಹಿರಿಯರ ಗೆಳೆತನ ದೊರಕಿದೆ. ಚಳ್ಳಕೆರೆಯ ಹೊಸ್ಮನೆಯ 114ರ ಹುಡುಗ(!) ಹನುಮಂತಪ್ಪ, ಕಾರಕುಂಡಿಯ ಬಾಗೂ ಪಿಂಗಳೆ, ಕುಂದಾಪುರ ಕುರುವಿನ ತುಂಗಾ ಪೂಜಾರಿ, ಸಿಂಧನೂರಿನ ಎಕ್ರನಾಳ್ ಸಾಹುಕಾರ್, ಹುಲಿಯಜ್ಜ, ವಿಜಯಪುರದ ವಿಠ್ಟಲಗೌಡ ಬಿರಾದಾರ್, ದೇವೇಂದ್ರಪ್ಪ ಬಲೂಟಗಿ, ಜಮಖಂಡಿಯ ಹುಸೇನ್ಸಾಬ್ ಅಪರಾಜ್, ತಟ್ಟಿಹಳ್ಳದ ಜನ್ನಾಬಾಯಿ, ಕುಂಟಗಣಿಯ ಶತಾಯುಷಿ ಗೋವಿಂದಜ್ಜ ಹೀಗೆ ಹಲವರು ಜನ ಜೀವನ ಅನುಭವ ಹಂಚಿಕೊಂಡಿದ್ದಾರೆ.
ಯಾವುದೋ ಮೂಲೆಯ ಕೃಷಿ ಕತೆಯನ್ನು ಇನ್ಯಾವುದೋ ಮೂಲೆಯಲ್ಲಿ ಕುಳಿತು ಓದುತ್ತ ಮಣ್ಣಿನ ಪರಿಮಳ ಹೀರುವ ಕ್ರಿಯೆಯಲ್ಲಿ ಜ್ಞಾನ ಭಾಗ್ಯವಿದೆ. ಸಮಾಜದ ಕೃಷಿಯ ಭಾಗವಾದ ನಾವು ನಮ್ಮದನ್ನೇ ಅರಿಯದೇ ಪ್ರಪಂಚ ಪರ್ಯಟನೆಗೆ ಹೊರಡುವುದು ಸರಿಯಲ್ಲ.

ಮಣ್ಣಿನ ಓದು
Sale!
ಮಣ್ಣಿನ ಓದು
$2.04 $1.23
- Publisher: Sahitya Prakashana
- Book Format: Ebook
- Language: Kannada
- Pages: 152
- Year Published: 2017
- Category: Travelogue
Only logged in customers who have purchased this product may leave a review.
Reviews
There are no reviews yet.