ಶ್ರೀ ಗುರುಭ್ಯೋ ನಮಃ ಹರಿಃ ಓಂ
ಸಂಪತ್ತು ಬೇಕೆನ್ನುವವರುˌ ದುಡ್ಡು-ಕಾಸು ಬೇಕೆನ್ನುವವರುˌ ಶ್ರೀಮಂತಿಕೆಯ ಅಪೇಕ್ಷೆ ಉಳ್ಳವರುˌ ಬಡತನದ ಬೇಗೆಯಿಂದ ಬೆಂದವರುˌ ಆರ್ಥಿಕ ತೊಂದರೆಯಿಂದ ನೊಂದವರುˌ ದಾರಿದ್ರ್ಯದ ಸಂಕಟದಿಂದ ಕುಗ್ಗಿ ಹೋದವರುˌ ಸಾಲದ ಹೊರೆಯಿಂದ ಬಗ್ಗಿ ಹೋದವರುˌ ಭಾಗ್ಯ ಸೌಭಾಗ್ಯಗಳು ಬೇಕೆಂದು ಪ್ರಾರ್ಥಿಸುವರು ಈ ಕೆಳಗಿನ ಶ್ಲೋಕವನ್ನು ಪಠಿಸಬೇಕು ಪಠಿಸಬೇಕು.
” ಶ್ರೀಧಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿ ಶ್ರೀವಿಭಾವನಃ | ಶ್ರೀಧರಃ ಶ್ರೀಕರ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ||”
ಗಂಡು ಹೆಣ್ಣುಗಳಲ್ಲಿ ಪ್ರೇಮ ಇನ್ನೂ ಧೃಡವಾಗದಿದ್ದರೆˌ ಪ್ರೇಮ ವೈಫಲ್ಯದ ಲಕ್ಷಣಗಳು ಇದ್ದರೆˌ ನಮ್ಮ ಹೆಣ್ಣುಮಗಳಿಗೆ ಇನ್ನೂ ಇನ್ನೂ ವರ ದೊರೆಯುತ್ತಿಲ್ಲ ಎಂಬ ಆತಂಕವಿದ್ದರೆˌ ನಮ್ಮ ಹುಡುಗನಿಗೆ ಸರಿಯಾದ ಕನ್ಯೆ ದೊರೆಯುತ್ತಿಲ್ಲ ಎಂಬ ಚಿಂತೆ ಇದ್ದರೆˌ ಗಂಡು ಹೆಣ್ಣು ಒಪ್ಪಿಕೊಂಡ ಮೇಲೆ ಕಲ್ಯಾಣಮಂಟಪ ದೊರೆಯುತ್ತಿಲ್ಲ ಅಥವಾ ಎಲ್ಲವೂ ಸುಸೂತ್ರವಾಗಿ ಜರಗುತ್ತಿಲ್ಲ ಎಂಬಂತಿದ್ದರೆˌ ಮದುವೆ ಮನೆಯಲ್ಲಿ ಜಗಳˌ ಕದನˌ ಬೇಸರˌ ಅನುಮಾನಗಳಿಲ್ಲದೇ ಹೂವು ಎತ್ತಿದಂತೆ ಮದುವೆಯಾಗಬೇಕಾದರೆˌ ಮದುವೆಯಾದ ದಂಪತಿಗಳು ಜೀವನವಿಡಿ ಅನ್ಯೋನ್ಯವಾಗಿ ಇರಬೇಕಾದರೆ ಈ ಸ್ತೋತ್ರವನ್ನು ಹೇಳಿಕೊಳ್ಳಬೇಕು.”
ಭೂತಭವ್ಯಭವನ್ನಾಥಃ ಪವನಃ ಪಾವನೊsನಲಃ |ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ||”
ನಾಹಂ ಕರ್ತಾ ಹರಿಃ ಕರ್ತಾ
(ಮುಂದುವರಿಯುವದು)