Your Cart

Need help? Call +91 9535015489

📖 Print books shipping available only in India. ✈ Flat rate shipping

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ರಂಗಗೀತೆಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ರಂಗ ಗೀತೆಗಳು ಬಿ.ಜಯಶ್ರೀ ಮತ್ತು ತಂಡ ಶ್ರೀಮತಿ ಬಿ.ಜಯಶ್ರೀ ಅವರ ತಂಡದಿಂದ ರಂಗಗೀತೆಗಳ ಪ್ರಸ್ತುತಿ. ಮರಾಠಿಯಲ್ಲಿ ‘ರಂಗಗೀತೆ’ಗಳ ಒಂದು ಪರಂಪರೆಯೇ ಬೆಳೆದು ಬಂದಿದೆ. ಅದು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರವಾಗಿ ಇಂದಿಗೂ ಜನಪ್ರಿಯವಾಗಿದೆ. ಕನ್ನಡದಲ್ಲಿ ಅಂಥ ರಂಗಸಂಗೀತ ಒಂದು ಕಾಲಕ್ಕೆ ಇತ್ತು, ಈಗ ಇಲ್ಲ. ಅದಕ್ಕೆ ಬದಲಾಗಿ, ಕನ್ನಡದ ಆಧುನಿಕ ರಂಗಭೂಮಿಯು ರಂಗಭೂಮಿಗೇ ವಿಶಿಷ್ಟವಾದ ಹೊಸ ಸಂಗೀತಪ್ರಕಾರವೊಂದನ್ನು ರೂಪಿಸಿಕೊಂಡಿದೆ. ಇದಕ್ಕೆ ಅಸ್ತಿವಾರ ಹಾಕಿ ಜನಪ್ರಿಯಗೊಳಿಸಿದವರು ಬಿ.ವಿ.ಕಾರಂತರು. ಕಾರಂತರ ಗರಡಿಯಲ್ಲಿ ಬೆಳೆದ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಸಮಾರೋಪ ಸಮಾರಂಭ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಸಮಾರೋಪ ಸಮಾರಂಭ ಇದು ಧಾರವಾಡ ಸಾಹಿತ್ಯ ಸಂಭ್ರಮ-2016 ರ ಕೊನೆಯ ಕಾರ್ಯಕ್ರಮ. ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿಯವರು ಸಾಹಿತ್ಯ ಸಂಭ್ರಮದ 4ನೆ ಆವೃತ್ತಿಯ ಕಾರ್ಯಕ್ರಮಗಳ ಸಮೀಕ್ಷೆ ನಡೆಸುತ್ತಾರೆ. ಸಂಶೋಧಕ-ಇತಿಹಾಸಕಾರ ಷ.ಶೆಟ್ಟರ್ ಸಂಭ್ರಮ ಟ್ರಸ್ಟಿನ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸುತ್ತಾರೆ. ಕಾರ್ಯದರ್ಶಿ ಲೋಹಿತ್ ನಾಯ್ಕರ ಅವರ ವಂದನಾರ್ಪಣೆಯೊಂದಿಗೆ ಸಭೆ ಮುಗಿಯುತ್ತದೆ.

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೬: ಸಂವಾದ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೬: ಸಂವಾದ ಪ್ರಸಿದ್ಧ ಚಲನಚಿತ್ರ ಮತ್ತು ನಾಟಕ ನಿರ್ದೇಶಕ ಎಂ.ಎಸ್.ಸತ್ಯು ಮತ್ತು ಪ್ರಸಿದ್ಧ ನಟ ಅನಂತನಾಗ ಅವರು ಪರಸ್ಪರ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ಸಿನಿಮ ಮತ್ತು ಸಾಹಿತ್ಯದೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕವಿ-ಕತೆಗಾರ, ಸಿನಿಮಾ ಪ್ರೀತಿಯ ಜಯಂತ ಕಾಯ್ಕಿಣಿ ಸಂವಾದಕ್ಕೆ ಚಾಲನೆ ನೀಡುತ್ತಾರೆ. ಎಂ.ಎಸ್. ಸತ್ಯ ಅನಂತನಾಗ ಜಯಂತ್ ಕಾಯ್ಕಿಣಿ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೫: ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೫: ನಮ್ಮ ಕೃಷಿ ಸಂಸ್ಕೃತಿಯ ಸವಾಲುಗಳು ನಮ್ಮ ಕೃಷಿ ಅರೋಗ್ಯಕರವಾಗಿದ್ದರೆ ಸಾಹಿತ್ಯ ಸಂಸ್ಕೃತಿ ಶಿಕ್ಷಣ ಆರೋಗ್ಯಗಳು ಸುಖಕರವಾಗಿರುತ್ತವೆ. ಈಗ ಕೃಷಿಗೆ ಅಭಿವೃದ್ಧಿ, ಹವಾಮಾನ ವೈಪರೀತ್ಯ, ವೀಪರಿತ ಆಶೆಗಳಿಂದ ದೊಡ್ಡ ಹೊಡೆತ ಬಿದ್ದಿದೆ. ಸರಿಯಾಗಿ ಮಳೆಯಾಗುತ್ತಿಲ್ಲ. ಕೃಷಿ ಆಶೆಗಳಿಂದ ದೊಡ್ಡ ಹೊಡೆತ ಬಿದ್ದಿದೆ. ಸರಿಯಾಗಿ ಮಳೆಯಾಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಕೃಷಿಯ ಖರ್ಚು ಹೆಚ್ಚಾಗುತ್ತಿದೆ, ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ. ರೈತರ ಸಾಲ ಬೆಳೆಯುತ್ತಲೇ ಇದೆ. ಇವೆಲ್ಲವುಗಳ ಪರಿಣಾಮವಾಗಿ ದಿನದಿಂದ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೪: ವಿ.ಸೀ. ಮತ್ತು ದಿನಕರ ದೇಸಾಯಿ ಅವರ ಕವಿತೆಗಳ ಓದು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೪: ವಿ.ಸೀ. ಮತ್ತು ದಿನಕರ ದೇಸಾಯಿ ಅವರ ಕವಿತೆಗಳ ಓದು ಕವಿಗಳು ತಮ್ಮ ಸ್ವಂತ ಕವಿತೆಗಳನ್ನು ಓದುವ ಕವಿಗೋಷ್ಠಿಗಳು ಸಾಮಾನ್ಯ ಆದರೆ ಇಲ್ಲಿ ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಾವ್ಯಾಸಕ್ತರು ವಿ.ಸೀ. ಅಥವಾ ದಿನಕರ ದೇಸಾಯಿಯವರ ಕವಿತೆಗಳಲ್ಲಿ ತಮಗೆ ಮೆಚ್ಚಿಗೆಯಾದ ಒಂದನ್ನು ಓದುತ್ತಾರೆ. ಕಾವ್ಯವಾಚನವೆಂದರೆ ಯಾಂತ್ರಿಕವಾಗಿ ಪ್ರತಿಯೊಂದು ಸಾಲನ್ನೂ ಎರಡೆರಡು ಸಲ ಓದುವದಿಲ್ಲ. ಅದು ಒಂದು ಕಲೆ. ಕವಿತಯ ಭಾವ ಅರ್ಥಗಳು ಸ್ಫುಟವಾಗುವಂತೆ ಪರಿಣಾಮಕಾರಿಯಾಗಿ ಓದಬೇಕು. ಇಂಥ ಓದಿನ ಮೂಲಕ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೩: ಕನ್ನಡದಲ್ಲಿ ಇಷ್ಟೊಂದು ಮಹಾಕಾವ್ಯಗಳು ಏಕೆ?

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೩: ಕನ್ನಡದಲ್ಲಿ ಇಷ್ಟೊಂದು ಮಹಾಕಾವ್ಯಗಳು ಏಕೆ? ಆಧುನಿಕ ಕಾಲದಲ್ಲಿ ಮಹಾಕಾವ್ಯ ಹುಟ್ಟಲಾರದು. ಅದಕ್ಕೆ ಬೇಕಾದ ಸಾಮಾಜಿಕ ವ್ಯವಸ್ಥೆ, ಸಾಂಘಿಕ ಅನುಭವ ಈಗಿಲ್ಲ ಎಂಬ ಅಭಿಪ್ರಾಯವೊಂದಿತ್ತು. ಭಾರತದ ಉಳಿದ ಭಾಷೆಗಳಲ್ಲಿ ಹೇಗೋ, ಏನೋ ಕನ್ನಡದಲ್ಲಿ ಮಾತ್ರ ಕಳೆದ ಶತಮಾನದಿಂದಲೂ ಅನೇಕ ಮಹಾಕಾವ್ಯಗಳು ರಚನೆಯಾಗಿವೆ. ಮರಾಠಿಯಲ್ಲಿ ಮಹಾಕಾವ್ಯಗಳಿಲ್ಲ ಯಾಕಂದರೆ ಆ ಭಾಷೆಯಲ್ಲಿ ಮಹಾಕಾವ್ಯಗಳ ಪರಂಪರೆ ಇರಲಿಲ್ಲ ಎನ್ನುತ್ತಾರೆ. ಕನ್ನಡದಲ್ಲಿ ಮಹಾಕಾವ್ಯಗಳ ದೀರ್ಘ ಪರಂಪರೆ ಇದ್ದುದೇ ಈಗಿನ ಅವುಗಳ ರಚನೆಗೆ ಕಾರಣವಾಗಿದೆಯೆ? ನಮ್ಮಲ್ಲಿ ಇಷೊಂದು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೨: ಸತ್ಯದೊಂದಿಗೆ ಪ್ರಯೋಗ – ಕನ್ನಡ ಆತ್ಮಕಥೆಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೨: ಸತ್ಯದೊಂದಿಗೆ ಪ್ರಯೋಗ – ಕನ್ನಡ ಆತ್ಮಕಥೆಗಳು ಗಾಂಧೀಜಿಯವರು ತಮ್ಮ ಕಥೆಯನ್ನು “ಸತ್ಯದೊಂದಿಗೆ ಒಂದು ಪ್ರಯೋಗ” ಎಂದು ಕರೆದರು. ಆತ್ಮಕಥೆಗಳನ್ನು ಬರೆಯುವುದು ಬಹಳ ನಾಜೂಕಿನ ಕೆಲಸ – ಕತ್ತಿಯ ಧಾರೆಯ ಮೇಲಿನ ನಡಿಗೆ. ಸಾಮಾನ್ಯವಾಗಿ ಆತ್ಮಕಥೆಗಳು ಬಾಲ್ಯದ ಬಗ್ಗೆ ವಸ್ತುನಿಷ್ಠವಾಗಿರುತ್ತವೆ. ತಾರುಣ್ಯದ ಬಗ್ಗೆ ಹಾಗೂ – ಹೀಗೂ ಹೊಯ್ದಾಡುತ್ತವೆ. ಮಧ್ಯ ವಯಸ್ಸಿನಿಂದ ಸ್ವಸಮರ್ಥನಿಗೆ, ಆಗದವರ ಬಗ್ಗೆ ಸೇಡು ತೀರಿಸಿಕೊಳ್ಳಲು, ಅನೇಕ ವಿಷಯಗಳನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತವೆ. ಯಾವ ಆತ್ಮಕಥೆಯಲ್ಲೂ ಭ್ರಷ್ಟಾಚಾರ ನಡೆಸಿ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೧: ಲೇಖಕರೊಂದಿಗೆ ಸಂವಾದ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೧: ಲೇಖಕರೊಂದಿಗೆ ಸಂವಾದ ಎರಡನೆಯ ದಿನದ ಈ ಕೊನೆಯ ಗೋಷ್ಠಿಯಲ್ಲಿ ಪ್ರಸಿದ್ಧ ಲೇಖಕ ಸಿ.ಪಿ.ಕೃಷ್ಣಕುಮಾರ(ಸಿ.ಪಿ.ಕೆ) ಅವರೊಂದಿಗೆ ಸಂವಾದ ನಡೆಯುತ್ತದೆ. ಈ ಗೋಷ್ಠಿಯಲ್ಲಿ ಲೇಖಕರ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯವಲ್ಲ. ಅವರ ಸಾಹಿತ್ಯಿಕ ಸಾಧನೆಗಳನ್ನು ಕುರಿತು ಚರ್ಚಿಸುವುದು ಮುಖ್ಯ. ಮೊದಲಿಗೆ, ಸಂವಾದಕರಾದ ಡಿ.ಕೆ.ರಾಜೇಂದ್ರ ಅವರು ಸಂವಾದಕ್ಕೆ ಚಿಕ್ಕ ಪ್ರಸ್ತಾವನೆ ಹಾಕಿ, ಪ್ರಶ್ನೆಗಳನ್ನು ಕೇಳುತ್ತಾರೆ. ಸಂವಾದವು ಕೇವಲ ಪ್ರಶ್ನೋತ್ತರಕ್ಕೆ ಸೀಮಿತವಾಗದೆ ಸಂವಾದಕ – ಸಂವಾದಿತರ ನಡುವಿನ ಚರ್ಚೆಯೂ ಆಗಬಹುದು. ಭಿನ್ನಾಭಿಪ್ರಾಯಗಳ ಚಕಮಕಿಯೂ ನಡೆಯಬಹುದು. […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವನ್ನು ಪ್ರೀತಿಯಿಂದ ಓದಿಕೊಂಡು, ಸಾಹಿತಿಗಳೊಂದಿಗೆ. ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿರುವ ಸಾವಿರಾರು ಜನ ಸಾಹಿತ್ಯಾಸಕ್ತರಿದ್ದಾರೆ. ಇಂಥವರು ಸಾಹಿತ್ಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಕೇವಲ ಕೇಳುಗರಾಗಿ ಭಾಗವಹಿಸುದಕ್ಕಷ್ಟೇ ಸೀಮಿತರಾಗಿರುತ್ತಾರೆ. ಆದರೆ ಸಾಹಿತ್ಯದ ಪೋಷಣೆ, ಬೆಳವಣಿಗೆಗಳಲ್ಲಿ ಅವರ ಪಾಲು ದೊಡ್ಡದು. ಅವರೇ ಪುಸ್ತಕಗಳನ್ನು ಕೊಳ್ಳುವವರು, ಓದುವವರು, ಸಮಾನಮನಸ್ಕರೊಂದಿಗೆ ಚರ್ಚಿಸುವವರು. ಭಾಷೆ-ಸಾಹಿತ್ಯಗಳ ಬಗ್ಗೆ ಅಭಿಮಾನವಿರುವವರಿಗೂ ಸಾಹಿತ್ಯ ಸಂಭ್ರಮದಲ್ಲಿ ವೇದಿಕೆ ಒದಗಿಸಬೇಕು ಎಂಬ ಉದ್ದೇಶ […]