ಗೋಷ್ಠಿ 9 ವೇಳೆ : 3.30-4.30 ಲಾವಣಿಯ ಲಾವಣ್ಯ ಉತ್ತರ ಕರ್ನಾಟಕದ ಅನೇಕ ಭಾಗದಲ್ಲಿ ಇನ್ನೂ ಕ್ರಿಯಾಶೀಲವಾಗಿರುವ ಜಾನಪದ ಹಾಡುಗಾರಿಕೆಯ ಒಂದು ಮುಖ್ಯ ಪ್ರಕಾರ ಲಾವಣಿ. ಒಂದು ಕಾಲಕ್ಕೆ, ಈ ಭಾಗದಲ್ಲಿ ಸಂಸ್ಕøತಿ ಪ್ರಸಾರದಲ್ಲಿ ಲಾವಣಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಕಾಲಕಾಲಕ್ಕೆ ಬದಲಾವಣೆ ಪಡೆದು ತನ್ನ ಸೃಜನಶೀಲತೆಯನ್ನು ಜೀವಂತವಾಗಿ ಇರಿಸಿಕೊಂಡಿತ್ತು. ಇಂಗ್ಲೀಷಿನ ‘ಬ್ಯಾಲಡ್’ಗೆ ಸಂವಾದಿಯಾದದ್ದು, ಕಥೆ ಹೇಳುವ ಒಂದು ಕಾವ್ಯಪ್ರಕಾರ ಎಂದು ತಪ್ಪು ಗ್ರಹಿಕೆಗೆ ಒಳಗಾಗಿರುವ ಲಾವಣಿಗೆ ಅದರದೇ ಆದ ದೇಸೀ ರಾಚನಿಕ ವಿನ್ಯಾಸ, ವಸ್ತು, […]
